ಶಿಗ್ಗಾವ್

ಶಿವಾನಂದ ಡಾವಣಗೇರಿಗೆ ಸನ್ಮಾನ

ಶಿವಾನಂದ ಡಾವಣಗೇರಿಗೆ ಸನ್ಮಾನ

ಶಿಗ್ಗಾವಿ 18: ದುಂಡಶಿ ಕೃಷಿ ಕೇಂದ್ರದ ಸಹಾಯಕ ಅಧಿಕಾರಿ ಶಿವಾನಂದ ಡಾವಣಗೇರಿ ತಾಲೂಕಿನಲ್ಲಿ ರೈತರ ಏಳ್ಗೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಉನ್ನತ ಹುದ್ದೆಗೆ ಬಡ್ತಿ ಪಡೆದ ಕಾರಣ ಯುವ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ ಚಾಕಲಬ್ಬಿ ನೇತೃತ್ವದಲ್ಲಿ  ಸನ್ಮಾನಿಸಿ ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಯುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಗೌರವಾಧ್ಯಕ್ಷ ರಮೇಶ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕೊಂಡಾಯಿ, ಸಿದ್ದಲಿಂಗಯ್ಯ ಹಿರೇಮಠ, ಪಕ್ಕೀರಗೌಡ ಗೋಯಪ್ಪನವರ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ