ಶಿಗ್ಗಾವ್

ರ‍್ಯಾವಪ್ಪ ಕುಬಸದಗೆ ಅಹಿಂದಾ ಒಕ್ಕೂಟದ ವತಿಯಿಂದ ಸನ್ಮಾನ

ರ‍್ಯಾವಪ್ಪ ಕುಬಸದಗೆ ಅಹಿಂದಾ ಒಕ್ಕೂಟದ ವತಿಯಿಂದ ಸನ್ಮಾನ

ಶಿಗ್ಗಾವಿ 09: ತಾಲೂಕಿನಾದ್ಯಂತ ಸಂತ, ಶರಣರ ನಾಡಲ್ಲಿ ತಮ್ಮದೇ ಆದ ಮಾತಿನ ಒರಟು ಶೈಲಿಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿ ವಿಚಾರಧಾರೆಗಳನ್ನು ನೇರ ನುಡಿಗಳಲ್ಲಿ ಹೇಳಿ ಸಂತನೆನಿಸಿಕೊಂಡ ತಾಲೂಕಿನ ರ‍್ಯಾವಪ್ಪ ಕುಬಸದ ಅವರನ್ನು ಪಟ್ಟಣದಲ್ಲಿ ಅಹಿಂದಾ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಅಹಿಂದಾ ಒಕ್ಕೂಟದ ಮುಖಂಡರಾದ ಡಿ ಎಸ್ ಮಾಳಗಿಯವರು ಸನ್ಮಾನಿಸಿ ಮಾತನಾಡಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ನಾಡಾದ ಶಿಗ್ಗಾವಿಯಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಂಡು ಸತ್ಯ ಮತ್ತು ನೇರ ಮಾತುಗಳಿಂದಲೇ ಶಿಗ್ಗಾವಿ ಜನರ ಪ್ರೀತಿಗೆ ರ‍್ಯಾವಪ್ಪ ಪಾತ್ರರಾಗಿದ್ದಾರೆ, ಅವರ ಆ ನೇರವಾದಿತ್ವವು ಎಷ್ಟೋ ಜನಕ್ಕೆ ಮಾರ್ಗದರ್ಶನ ಮಾಡಿದೆ ಎಂಬುದನ್ನು ಜನತೆಯೇ ಹೇಳುತ್ತಿದ್ದಾರೆ ಅವರನ್ನು ಇಂದು ನಮ್ಮ ಅಹಿಂದಾ ಒಕ್ಕೂಟದಿಂದ ಸನ್ಮಾನಿಸಿರುವುದು ವಯಕ್ತಿಕವಾಗಿ ಸಂತಸ ತಂದಿದೆ ಎಂದು ಮಾರ್ಮಿಕವಾಗಿ ನುಡಿದರು.

ಈ ಸಂದರ್ಭದಲ್ಲಿ ಅಹಿಂದಾ ಒಕ್ಕೂಟದ ತಾಲೂಕಾದ್ಯಕ್ಷ ಕುಬೇರಪ್ಪ ರಾಮನಕೊಪ್ಪ, ಮುಖಂಡರಾದ ನಾಗರಾಜ ಹಾವೇರಿ, ನಿಂಗಪ್ಪ ಹರಿಜನ, ಯಲ್ಲಪ್ಪ ಹರಿಜನ, ಕಾಳಪ್ಪ ಬಡಿಗೇರ, ಜಾಫರ್‍ಸಾಬ್ ಯಡಳ್ಳಿ, ಸಿದ್ದಪ್ಪ ಹರಿಜನ, ಭೀಮಣ್ಣ ಹೊಟ್ಟೂರ, ಸಂತೋಷ ದೊಡ್ಡಮನಿ, ಕಿರಣ ಸುರಪಗಟ್ಟಿ, ಮಲ್ಲಿಕಾರ್ಜುನ ಹಡಪದ, ಪುತ್ರಪ್ಪ ವಾಲ್ಮೀಕಿ ಸೇರಿದಂತೆ ವಿವಿಧ ಮುಖಂಡರು ಹಾಗೂ ಅಹಿಂದಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ