ವಿಜಯಪುರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಶಿ ಅವರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಶಿ ಅವರಿಗೆ ಸನ್ಮಾನ

ದೇವರಹಿಪ್ಪರಗಿ 13 : ತಾಲೂಕಿನ ಪಡಗಾನೂರ ಗ್ರಾಮದ ಲಗಮಾದೇವಿ ಡೊಳ್ಳಿನ ಸಂಘ ಹಾಗೂ ತಿಕೋಟಾದ ಹೊನ್ನಮೇಶ್ವರ ಡೊಳ್ಳಿನ ಸಂಘದ ಪದಾಧಿಕಾರಿಗಳು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸುರೇಶ ರಾಮಚಂದ್ರ ಜೋಶಿ(ಜಾನಪದ ಕ್ಷೇತ್ರ) ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಕಲೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕ ಕಬೂಲ ಕೊಕಟನೂರ, ಮುಖಂಡರಾದ ಗುರುನಾಥ ಮುರಡಿ, ಗುಂಡು ತಿಕೋಟಾ, ನಿಂಗಪ್ಪ ಪೂಜಾರಿ, ಭೀಮು ತಿಕೋಟಾ, ಚಂದು ಪೂಜಾರಿ, ಪ್ರಕಾಶ ಸಿಂದಗಿ, ಮಹಾರಾಜ ಜಕ್ಕನೂರ, ಮಾಜಿ ಸೈನಿಕ ಅಮೋಗಿ ಪಡಗಾನೂರ, ಗೀಗೀ ಪದ ಗಾಯಕ ಮಲ್ಲನಗೌಡ ಕೊರಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ