ನೂತನ ಅಧ್ಯಕ್ಷೆ ರೂಪಾ ಬನ್ನಿಕೊಪ್ಪಗೆ ಸನ್ಮಾನ
ಶಿಗ್ಗಾವಿ 11: ಜಯನಗರದ ಸರ್ವತೋಮುಖ ಹಾಗೂ ಸಮಗ್ರ ಅಭಿವೃದ್ದಿಗೆ ನಾನು ಕಂಕಣಬದ್ದನಾಗಿದ್ದೇನೆ ಎಂದು ಪುರಸಭೆ ಸದಸ್ಯ ಹಾಗೂ ಜಯನಗರ ವಿಕಾಸ ವೇದಿಕೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಹೇಳಿದರು.
ಪಟ್ಟಣದ ಜಯನಗರದ ವಿನಾಯಕ ದೇವಸ್ಥಾನದಲ್ಲಿ ಪುರಸಭೆ ನೂತನ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನನಗೆ ಎಷ್ಟು ಸಾಧ್ಯವಾಗುತ್ತೇ ಅಷ್ಟು ನಾನು ಜಯನಗರವನ್ನು ಅಭಿವೃದ್ದಿಪಡಿಸಲು ಹಾಗೂ ವಿಶೇಷ ಯೋಜನೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಖಾಂತರ ಪಡೆದು ಅಭಿವೃದ್ದಿಪಡಿಸುತ್ತೇನೆ ಆದರೆ ಜಯನಗರದ ನಿವಾಸಿಗಳು ಸಹಕರಿಸಿ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ರೂಪಾ ಬನ್ನಿಕೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಇದೆ 21 ನೇ ವಾರ್ಡಿನಿಂದ ಆರಿಸಿಬಂದು ಈಗ 2 ನೇ ಬಾರಿ 1 ನೇ ವಾರ್ಡಿನಿಂದ ಆಯ್ಕೆಯಾಗಿ ಈಗ ಮಾನ್ಯಮುಖ್ಯಮಂತ್ರಿಗಳ ಕೃಪಾಕಟಾಕ್ಷದಿಂದ ಪುರಸಭೆ ಅಧ್ಯಕ್ಷೆಯಾಗಿದ್ದು ನಾನು ಎಷ್ಟು ದಿನ ಅಧ್ಯಕ್ಷೆಯಾಗಿ ಆಡಳಿತ ನೆಡೆಸುತ್ತೇನೆ ಅಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಅಲ್ಲದೇ ಪಟ್ಟಣದ ಅಭಿವೃದ್ದಿಗೆ ಬದ್ದನಾಗಿದ್ದೇನೆ ಆದ್ದರಿಂದ ಪಟ್ಟಣದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮ ಸಹಕಾರದಿಂದ ನಿಮ್ಮ ಮನೆ ಬಾಗಿಲಿಗೆ ಪುರಸಭೆ ತೆಗೆದುಕೊಂಡು ಬರುವ ದಿಟ್ಟ ಹೆಜ್ಜೆಯನ್ನು ಬರುವ ದಿನಗಳಲ್ಲಿ ಮಾಡುತ್ತೇನೆ ಎಂದರು.
ಜಯನಗರ ವಿಕಾಸ ವೇದಿಕೆ ಉಪಾಧ್ಯಕ್ಷ ಉಮೇಶ ಗೌಳಿ ಮಾತನಾಡಿ ಜಯನಗರ ಅಭಿವೃದ್ದಿಗೆ ವಾರ್ಡಿನ ಎಲ್ಲ ಸದಸ್ಯರು ಸಹಕರಿಸಿದ ಹಿನ್ನಲೆಯಲ್ಲಿ ಇಂದು ಜಯನಗರ ಪಟ್ಟಣದಲ್ಲಿ ಮಾದರಿಯಾಗಿದೆ ಕಾರಣ ಎಲ್ಲ ವಾರ್ಡಿನ ಹಿರಿಯರು, ಕಿರಿಯರು, ಮಹಿಳೆಯರು ಸದಾ ನಮಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದು ಅವರ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿದ್ದೇವೆ ಎಂದರು.
ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದ್ದು ಇನ್ನೂ ಹೆಚ್ಚಿನ ಜವ್ದಾಬಾರಿಯನ್ನು ನೀಡಿದೆ ಹಾಗೂ ಪುರಸಭೆ ಅಭಿವೃದ್ದಿಗೆ ಸಾರ್ವಜನಿಕರು ಸಹಕರಿಸಬೇಕು ಅಲ್ಲದೇ ಮೊದಲಿಗೇ ಪುರಸಭೆಗೆ ಅನುಧಾನದ ಕೊರತೆಯಿತ್ತು ಮಾನ್ಯ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿಯವರು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾದ ಹಿನ್ನಲೆಯಲ್ಲಿ ಪುರಸಭೆಗೆ ಹೆಚ್ಚಿನ ಅನುಧಾನ ಒದಗಿ ಬಂದಿದೆ ಹಾಗೂ ಪಟ್ಟಣವನ್ನು ಮಾದರಿ ಪಟ್ಟಣ ಮಾಡಬೇಕೆಂಬ ಬೊಮ್ಮಾಯಿಯವರ ಕನಸ್ಸು ಬರುವ ದಿನಗಳಲ್ಲಿ ನನಸ್ಸಾಗಲಿದೆ ಎಂದರು.
ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಒಕ್ಕೂಟದ ತಾಲೂಕ ಅಧ್ಯಕ್ಷೆ ಸುಶೀಲಮ್ಮ ಪಾಟೀಲ ಮಾತನಾಡಿ ತೊಟ್ಟಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಏಕೆಂದರೆ ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಅದಕ್ಕೆ ಸಾಕ್ಷೀ ರೂಪಾ ಬನ್ನಿಕೊಪ್ಪ ನಮ್ಮ ನೆರೆಹೊರೆಯಲ್ಲಿ ಬೆಳೆದು ಬಂದವರು ಮೃದು ಸ್ವಭಾವದ ಸರಳ ಸಜ್ಜಿನಿಕೆಯ ವ್ಯಕ್ತಿತ್ವ ಎಂದು ಅವರ ಅಧ್ಯಕ್ಷೆ ಅವಧಿಯಲ್ಲಿ ಪಟ್ಟಣ ಮಾದರಿ ಪಟ್ಟಣವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾಽಽ ಪಿ.ಆರ್.ಪಾಟೀಲ, ಡಾಽಽ ಬಿ.ಎಸ್.ಗೌಡರ, ಡಿ.ಎ.ಗೊಬ್ಬರಗುಂಪಿ, ಸೇರಿದಂತೆ ಇನ್ನೂ ಕೆಲವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಉಷಾ ಪಾಟೀಲ, ಜಗದೀಶ ಬನ್ನಿಕೊಪ್ಪ, ಡಾ. ಲಂಗೋಟಿ, ಜಿ.ಎನ್.ಯಲಿಗಾರ, ಬೀಮಸೇನ ಹಿರೂಲಾಲ, ಕರೇಗೌಡ್ರ, ವಿ.ಬಿ.ಗಾಯದ, ಪ್ರಕಾಶ ಪಾಲನಕರ, ನಾಗರಾಜ ಪಾಲನಕರ, ಮಂಜುನಾಥ ವೇರ್ಣೇಕರ, ಷಣ್ನುಖಪ್ಪ ಕಡೇಮನಿ, ಕಾಂಗೋ ಟೀಚರ, ಚಾರಿ ಸರ್, ಹಾನಗಲ್ಲ, ರಾಜು ಮಿರಜಕರ, ಸುರಗೀಮಠ, ಚಂದ್ರು ಜವಳಿ, ಹೂವಪ್ಪನವರ, ನೆಲ್ಲಿಕೊಪ್ಪ, ಬಸಯ್ಯ ಹಿರೇಮಠ, ಪ್ರೋ ಎಂ.ಎ.ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು, ಡಾಽಽ ಸಿ.ಡಿ.ಯತ್ನಳ್ಳಿ ವಂದಿಸಿದರು.