ಶಾಸಕ ಎ. ಎಸ್. ಪಾಟೀಲ(ನಡಹಳ್ಳಿ)ಗೆ ಸನ್ಮಾನ
ತಾಳಿಕೋಟಿ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ-ಶಾಸಕ ಎ. ಎಸ್. ಪಾಟೀಲ(ನಡಹಳ್ಳಿ) ಇವರನ್ನು ಮಿಣಜಗಿ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚಿಗೆ ಮಿಣಜಗಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ಶಾಸಕ ನಡಹಳ್ಳಿಯವರು ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಸಕ್ಕೆ ಚಿರಋಣಿಯಾಗಿರುವೆ. ಈ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಇದಕ್ಕೆ ನನಗೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಸನಗೌಡ ವಣಕಿಹಾಳ, ತಾ.ಪಂ. ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ದ್ಯಾಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಶಶೀಧರ ಬೆಣ್ಣೂರ, ಸಂಗನಗೌಡ ಬಿರಾದಾರ, ಎಸ್. ಟಿ. ಯಾಳವಾರ, ಎಮ್. ಎಸ್. ಯರನಾಳ, ಡಾ. ಸತೀಶ ತಿವಾರಿ, ಡಾ. ಶ್ರೀಶೈಲ ಹುಕ್ಕೇರಿ, ಪಿಡಿಓ ಬಿ. ಎಂ. ಸಾಗರ, ಉಪಸ್ಥಿತರಿದ್ಧರು.