ಬೈಲಹೊಂಗಲ

ಪತ್ರಕರ್ತ ಮಹಾಂತೇಶ ತುರುಮರಿಗೆ ಸನ್ಮಾನ

ಪತ್ರಕರ್ತ ಮಹಾಂತೇಶ ತುರುಮರಿಗೆ ಸನ್ಮಾನ

ಬೈಲಹೊಂಗಲ 16: ಜಾತ್ಯಾತೀತ ಮನೋಭಾವ ಹೊಂದಿರುವ ಹಿರಿಯ ಪತ್ರಕರ್ತ ಮಹಾಂತೇಶ ತುರುಮರಿ ಅವರ ಸಾಮಾಜಿಕ ಹಾಗೂ ಪತ್ರಿಕಾ ರಂಗದ ಸೇವೆ ಅನನ್ಯವಾಗಿದೆ ಎಂದು ದುರ್ಗಾ ಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಹೇಳಿದರು.  

ಪಟ್ಟಣದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪತ್ರಕರ್ತ ಮಹಾಂತೇಶ ತುರಮರಿ ಅವರ ಜನ್ಮ ದಿನ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸತ್ಕರಿಸಿ ಅವರು ಮಾತನಾಡಿ, ಹಲವಾರು ಸಂಘಟನೆಗಳ ಮಾರ್ಗದರ್ಶಕರಾಗಿ, ಸಮಾಜದ ಪ್ರತಿಯೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಾಂತೇಶ ತುರಮರಿ ಅವರಿಗೆ ಬರುವ ದಿನಮಾನಗಳಲ್ಲಿ ಹೆಚ್ಚಿನ ಸ್ಥಾನಮಾನಗಳು ದೊರೆಯಲಿ. ತಾಯಿ ದುರ್ಗಾ ಪರಮೇಶ್ವರಿ ಅವರಿಗೆ ಆಯುಷ್ಯ, ಆರೋಗ್ಯಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸಿದರು. 

ಪತ್ರಕರ್ತ ಮಹಾಂತೇಶ ತುರುಮರಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎಂಬುವುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಸಮಾಜದ ಎಲ್ಲ ಗುರು, ಹಿರಿಯರ, ಸಂಘಟನೆಗಳ ಮುಖಂಡರ, ಪದಾಧಿಕಾರಿಗಳ, ಯುವಕರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರಿಂದ ಸಮಾಜದಲ್ಲಿ ಹೆಚ್ಚು ಗುರುತಿಸಿಕೊಳ್ಳಲು ಕಾರಣವಾಗಿದೆ. ನಿರಂತರ ಶ್ರಮ, ಆಸಕ್ತಿ ಒಂದಿದ್ದರೆ ಸಮಾಜದಲ್ಲಿ ಗುರಿ ಸಾಧಿಸಬಹುದಾಗಿದೆ. ಜನ್ಮ ದಿನ ಅಂಗವಾಗಿ ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.  

ತುರಮರಿ ದಂಪತಿಗಳು ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.  ತುರಮರಿ ಕುಟುಂಬಸ್ಥರು, ದೇವಸ್ಥಾನ ಭಕ್ತರು ಇದ್ದರು. 


ಸುದ್ದಿ ಓದಿ