ಕೈಮಗ್ಗ ನೇಕಾರರಿಗೆ ಸನ್ಮಾನ
ಕಾರವಾರ 11 : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 7ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಇತ್ತಿಚಿಗೆ ಹೊನ್ನಾವರ ತಾಲ್ಲೂಕಿನ ಜೀವನ್ಮುಖಿ ಕೈಮಗ್ಗ ನೇಕಾರರ ಸಹಕಾರ ಸಂಘ ನಿ. ಮೂಡ್ಕಣಿ ಅವರ ಸಂಯುಕ್ತ ಆಶ್ರಯದಲ್ಲಿ ಕೈಮಗ್ಗ ನೇಕಾರರನ್ನು ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪರಮೇಶ್ವರ್ಪ ಟಿ.ಎಸ್, ಅಂತೋನಿ ಪೌಲ್ ನೋರೊನಾ, ಸಾವಿತ್ರಿ ಚಂದ್ರು ಹಳ್ಳೇರ, ಮಾರ್ಸೆಲಿನ್ ಎಫ್ ಮೆಂಡೊನ್ಸಾ, ಜವಳಿ ತನಿಖಾಧಿಕಾರಿ ಅಶೋಕ ಎಮ್. ಸುರಪೂರ ಹಾಜರಿದ್ದರು.