ಶಿಗ್ಗಾವ್

ಚಿನ್ನದ ಪದಕ ವಿಜೇತೆ ಲಕ್ಷ್ಮೀ ದೊಡ್ಡಗೌಡ್ರಗೆ ಸನ್ಮಾನ

ಚಿನ್ನದ ಪದಕ ವಿಜೇತೆ ಲಕ್ಷ್ಮೀ  ದೊಡ್ಡಗೌಡ್ರಗೆ ಸನ್ಮಾನ

ಶಿಗ್ಗಾವಿ 29: ತಾಲೂಕಿನ ಗಂಗೀಬಾವಿ ಶಶೀದರ ಯಲಿಗಾರ ರೆಸಾರ್ಟನಲ್ಲಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಗಂಗೀಬಾವಿ ಆಶ್ರಯದಲ್ಲಿ ಗೋಶಾಲೆ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆ ಸ್ನಾತಕೋತ್ತರ ಪದವಿಯಲ್ಲಿ 9 ಚಿನ್ನದ ಪದಕ ವಿಜೇತೆ ಸವಣೂರ ತಾಲೂಕಿನ ನಾಯಿಕೆರೂರನ ಲಕ್ಷ್ಮೀ ಬ ದೊಡ್ಡಗೌಡ್ರ ಅವರನ್ನು ಶ್ರೀಗಳಾದ ಅದೃಶ್ಯ ಕಾಡಶಿದ್ದೇಶ್ವರ ಮಹಾಸ್ವಾಮಿಗಳು ಕನ್ನೇರಿಮಠ ಕೊಲ್ಲಾಪೂರ, ಅರಳೇಲೆ ಹಿರೇಮಠ ಬಂಕಾಪೂರ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶಶೀದರ ಯಲಿಗಾರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತೋಶ್ರೀ ಅನ್ನಪೂರ್ಣಾ ಚ ಯಲಿಗಾರ, ಸುನೀತಾ ಶ ಯಲಿಗಾರ, ಆಕಾಶ ಯಲಿಗಾರ, ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ಗ್ರಾ.ಪಂ.ಸದಸ್ಯ ನಾಗರಾಜ ಸೂರಗೊಂಡ ಬಸವರಾಜ ಇಂಗಳಗಿ ಸೇರಿದಂತೆ ಯಲಿಗಾರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ