ಶಿಗ್ಗಾವ್

ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನ: ಗಣೇಶ್ ಗೌಡರ್‌ಗೆ ಸನ್ಮಾನ

ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನ: ಗಣೇಶ್ ಗೌಡರ್‌ಗೆ ಸನ್ಮಾನ

ಶಿಗ್ಗಾವಿ 17: ಪಟ್ಟಣದ ಶಾಸಕರ ಕಚೇರಿಯಲ್ಲಿ ಶಿಗ್ಗಾವಿಯ ಅಗ್ನಿಶಾಮಕ ಠಾಣೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಣೇಶ್ ಎಂ ಗೌಡರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಪ್ರಯುಕ್ತ ಅವರನ್ನು ಭಾಜಪ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ನಂತರ ಮಾತನಾಡಿದ ಶಿವಾನಂದ ಮ್ಯಾಗೇರಿ, ಅಗ್ನಿಶಾಮಕ ಮತ್ತು ತುರ್ತಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ನಾಗರೀಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಅವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ ಅವರ ಸೇವೆ ತಾಲೂಕಿಗೆ ಮಾದರಿಯಾಗಿದೆ ಅದು ನಮ್ಮ ತಾಲೂಕಿನ ಹೆಮ್ಮೆ ಎಂದರು. 

ಮುಖಂಡರುಗಳಾದ ಮಂಜುನಾಥ ಬ್ಯಾಹಟ್ಟಿ, ನರಹರಿ ಕಟ್ಟಿ, ರಮೇಶ ವನಹಳ್ಳಿ, ರೇಣುಕನಗೌಡ ಪಾಟೀಲ, ಶಿವರಾಜ ರಾಯಣ್ಣವರ, ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ಸಂತೋಷ ದೊಡ್ಡಮನಿ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಭಾಜಪದ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ