ಜಿಲ್ಲಾಧಿಕಾರಿ ದಾನಮ್ಮನವರಗೆ ಸನ್ಮಾನ
ತಾಳಿಕೋಟಿ24: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರನ್ನು ಪುರಸಭೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿಯಾಗಿರುವೆ. ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸಗಳಾಗಬೇಕೆಂದರೆ ನನಗೆ ನಿಮ್ಮೆಲ್ಲರ ಸಹಕಾರ ಬೇಕು. ನೀವು ಸಾರ್ವಜನಿಕರಿಗೆ ಕೊಡುವ ಅತ್ಯುತ್ತಮವಾದ ಸೇವೆಯೇ ನನಗೆ ನೀಡುವ ನಿಜವಾದ ಗೌರವವಾಗಿದೆ. ಅವರ ವಿಶ್ವಾಸ ಗಳಿಸಲು ಪ್ರಯತ್ನಿಸಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿದ್ಧಲಿಂಗ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಪಿ.ಬಿ. ಗತ್ತರಗಿ, ಜೆ.ಸಿ. ಹಾರಿವಾಳ, ಚಂದ್ರಶೇಖರ ಖಾಲಿಬಾಗ್, ಸಿದ್ದು ಕೊಳ್ಳಿ, ಆರ್.ವೈ. ನಾರಾಯಣಿ, ಶಿಲಾಧರ ಘತ್ತರಗಿ ಉಪಸ್ಥಿತರಿದ್ದರು.