ಅಮ್ಮಾಜಾನ ಬಂಗೇಶಗೆ ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ: ಪಟ್ಟಣದ ಜಯನಗರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯಾಗಿ ಸುಮಾರು 25 ವರ್ಷ ಸೇವೆ ಸಲ್ಲಿಸಿದ ಅಮ್ಮಾಜಾನ ಬಂಗೇಶ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.
ನಳಂದಾ ಶಾಲೆಯ ಮುಖ್ಯ ಶಿಕ್ಷಕ ಪಿ ವಿ ತೆಂಬದಮನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಮ್ಮಾಜಾನ ಬಂಗೇಶ ಅವರು ಸುದೀರ್ಘ 25 ವರ್ಷಗಳ ಸೇವೆಯಲ್ಲಿ ಮಕ್ಕಳ ಆರೈಕೆ ಮಾಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಸಿದ್ದಾರೆ ಅವರು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಅಶಿಸಿದರು.
ಸಾಕ್ಷರತೆಯ ಮಲ್ಲಿಕಾರ್ಜುನ ಕಾಳೆ, ನಳಂದಾ ಶಾಲೆಯ ಮುಖ್ಯ ಶಿಕ್ಷಕ ಪಿ ವಿ ತೆಂಬದಮನಿ ಅಂಗನವಾಡಿ ಕಾರ್ಯಕರ್ತೆರಾದ ನವನಗರದ ಎಮ್.ಸಿ. ದೇವಗೇರಿ, ಜನತಾ ಪ್ಲಾಟ್ನ ಎಲ್ ಎಮ್ ಕುಂದಗೋಳ, ಜಯನಗರದ ಎಸ್.ಆರ್. ಕದಡಿ ಇವರುಗಳನ್ನು ಸನ್ಮಾನಿಸಲಾಯಿತು.
ಪುರಸಭಾ ಸದಸ್ಯೆ ಮೈಮುನ್ನಿಸಾ ಲಕ್ಷ್ಮೇಶ್ವರ, ಬಾಲವಿಕಾಸ ಕಮಿಟಿಯ ಪಲ್ಲವಿ ಸಂಕಣ್ಣವರ, ಸ್ತ್ರೀ ಸಂಘದ ಅಧ್ಯಕ್ಷ ನಜಬುನ್ನಿಸಾ ಮಾಲ್ದಾರ, ಪ್ಯಾರಿಜಾನ ಮಾಲ್ದಾರ, ನಸ್ರೀನ ಸುಲ್ತಾನಖಾನವರ. ಬೀಬಿಆಶಾ ಮಾಲ್ದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯನಗರದ ಬಾಲವಿಕಾಸ ಕಮಿಟಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.