ಬೈಲಹೊಂಗಲ

ಇಂಚಲ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆರಿಗೆ ಮಾಜಿ ಶಾಸಕ ಜಗದೀಶ ಮೆಟಗುಡ್ಡರಿಂದ ಸನ್ಮಾನ

ಇಂಚಲ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆರಿಗೆ  ಮಾಜಿ ಶಾಸಕ ಜಗದೀಶ ಮೆಟಗುಡ್ಡರಿಂದ ಸನ್ಮಾನ

ಬೈಲಹೊಂಗಲ 07: ಪಟ್ಟಣ ಸಮೀಪದ ಇಂಚಲ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ  ಶಂಕರೆಪ್ಪ ಬಾಗೇವಾಡಿ, ಉಪಾಧ್ಯಕ್ಷೆ ರೇಣುಕಾ ಸಾವಲಗಿ  ಅವರಿಗೆ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರು ತಮ್ಮ ಗೃಹ ಕಚೇರಿಯಲ್ಲಿ  ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ  ಯುವ ಮುಖಂಡರು, ಉದ್ಯಮಿ ಶ್ರೀ ವಿಜಯ ಮೆಟಗುಡ್ಡ, ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಯುವ ಮುಖಂಡರಾದ ನಾಗಪ್ಪ ಮೇಟಿ, ಮಾದ್ಯಮ ವಕ್ತಾರ ದಯಾನಂದ ಪರಾಳಶೆಟ್ಟರ,  ಜಿಲ್ಲಾ ಯುವ ಮೋರ್ಚಾ ಕೋಶಾಧ್ಯಕ್ಷ ಸಚಿನ್ ಕಡಿ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಕ್ಲಷ್ಣವ್ವ ನೀಲನ್ನವರ, ಬಸವ್ವ ಸಾವಲಗಿ, ನೀಲವ್ವ ಬಾಗೇವಾಡಿ ಕಾಶವ್ವ ಸಂಗನಾಯ್ಕರ, ನೀಲವ್ವ ಹಿರೇಮೆತ್ರಿ, ಮಹಾಂತೇಶ ಬಾಜಿ ಹಾಗೂ ಇಂಚಲ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಮಲ್ಲಪ್ಪ ಬಾಗೇವಾಡಿ ಶಿವಾನಂದ ಬಾಗೇವಾಡಿ ಬಸವರಾಜ ದೊಡ್ಡಗಾಣಗಿ ರಮೇಶ ನೀಲನ್ನವರ ಉಪಸ್ಥಿತರಿದ್ದರು.

ಸುದ್ದಿ ಓದಿ