ಧಾರವಾಡ - ಹುಬ್ಬಳ್ಳಿ

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿಗೆ ಮಾಲಾರೆ​‍್ಣ, ಸನ್ಮಾನ

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿಗೆ ಮಾಲಾರೆ​‍್ಣ, ಸನ್ಮಾನ

ಹುಬ್ಬಳ್ಳಿ, ಜು. 9: ಸಮಾಜ ಸೇವೆ, ಸಧೃಡ ಸಮಾಜ ನಿರ್ಮಾಣ ಹಾಗೂ ಮೌಲ್ಯಾಧಾರಿತ ಬದುಕಿಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವ ರುದ್ರಾಕ್ಷಿಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು.  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶ್ರೀಗಳಿಗೆ ಮಾಲಾರೆ​‍್ಣ ಮಾಡಿ, ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಕ್ತರು ಶ್ರೀಗಳ ಆಶೀರ್ವಾದ ಪಡೆದು ನಮನ ಸಲ್ಲಿಸಿದರು.  

ಕಾರ್ಯಕ್ರಮದಲ್ಲಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಗ್ರಂಥಪಾಲಕರಾದ ಡಾ. ಸುರೇಶ್ ಡಿ. ಹೊರಕೇರಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಲೇಖಕ ಡಾ. ಗುರುರಾಜ್ ಪಾಟೀಲ, ಬಿ.ಎ. ಪಾಟೀಲ, ಎಸ್‌.ಕೆ. ಆದಪ್ಪನವರ, ಚಂದ್ರಶೇಖರ್ ಅಳಗುಂಡಗಿ, ಸಿ.ಜಿ. ಧಾರವಾಡಶೆಟ್ಟರ, ಪ್ರೊ. ಕೆ.ಎಸ್‌. ಕೌಜಲಗಿ, ವಿದ್ಯಾ ಒಂಟಮೂರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ