ಎಸ್‍ಎಸ್‍ಎಲ್‍ಸಿ ರ‍್ಯಾಂಕ ಪಡೆದ ವಿದ್ಯಾರ್ಥಿಗೆ ಸನ್ಮಾನ
ಶಿಗ್ಗಾವಿ 10: ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯ ಪರಿಷತ್ತ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಪ್ರಶಸ್ತಿ ಫ್ರಧಾನ ಕಾರ್ಯಕ್ರಮಕ್ಕೆ ಹೋಗದೇ ಇರುವ ತಾಲೂಕಿನ ಎಸ್.ಎಸ್.ಎಲ್.ಸಿ ರಾಜ್ಯಕ್ಕೆ 6 ನೇ ರ‍್ಯಾಂಕ ಪಡೆದ ತೇಜಸ್ಸ ಯಲಿಗಾರ, ಮಾಮಲೇದೇಸಾಯಿ ಉಪ ಪ್ರಾರ್ಚಾಯ ಜಿ.ಎನ್.ಯಲಿಗಾರ, ವಿರುಪಾಕ್ಷಪ್ಪ ದುಂಡಪ್ಪನವರ, ವರದಿಗಾರ ವಿಶ್ವನಾಥ ಬಂಡಿವಡ್ಡರ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಡಾ. ಬಸವನಾಂದ ಶ್ರೀಗಳು ಮತ್ತು ಬಸವ ದೇವರು, ವರದಿಗಾರ ಬಸವರಾಜ.ವ್ಹಿ.ಹೆಚ್, ತಾಲೂಕ ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಬಿ.ಜೆ.ಪಿ ಪ್ರದಾನ ಕಾರ್ಯದರ್ಶಿ ಸಂಜನಾ ರಾಯ್ಕರ್, ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಹಿರೇಮಠ, ಶಂಭು ಕೇರಿ ಉಪಸ್ಥಿತರಿದ್ದರು.