ಕಾಯಕ ನಿಷ್ಠೆಯ ಈರಮ್ಮಗೆ ಕಸಾಪದಿಂದ ಸನ್ಮಾನ
ತಾಳಿಕೋಟೆ 08: ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿ ಈರಮ್ಮ ಇಣಚಗಲ್ಲ ಅವರ ಕಾಯಕ ನಿಷ್ಟೆಯನ್ನು ಗಮನಿಸಿದ ತಾಲ್ಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಎಸ್.ಕೆ.ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಈರಮ್ಮಳಿಗೆ ಸನ್ಮಾನಿಸಿ ಗೌರವಿಸಿದರು.
ಈರಮ್ಮ ಎಸ್.ಕೆ ಪ.ಪೂ ಕಾಲೇಜಿನಲ್ಲಿ ಹಂಗಾಮಿ ಸ್ವಚ್ಛತಾ ಕಾರ್ಮಿಕಳಾಗಿ ಸೇವೆಯಲ್ಲಿದ್ದಾರೆ, ಅವರ ಕಾಯಕ ನಿಷ್ಠೆಯನ್ನು ಕಂಡು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ರೇವಣಸಿದ್ದಪ್ಪ ಲ. ಕೊಪ್ಪದ ನೇತೃತ್ವದಲ್ಲಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈರಮ್ಮಳ ಪ್ರಾಮಾಣಿಕವಾಗಿ ದುಡಿಯುವ ಉತ್ಸಾಹ ಉಳಿದವರಿಗೆ ಮಾದರಿ ಆಗಿದೆ, ಶಾಲಾ ಒಳಾಂಗಣ, ಹೊರಾಂಗಣ ಸ್ವಚ್ಛತೆ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾರೆ, ವಿದ್ಯಾರ್ಥಿಗಳಿಗೆ ನೆಚ್ಚಿನ ಅಜ್ಜಿಯಾಗಿ ಮಕ್ಕಳಿಗೆ ಪ್ರೀತಿಯನ್ನು ಧಾರೆ ಎರೆಯುತ್ತಾ ಪ್ರೀತಿಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಚೇರಮನ್ ಮಹಾಂತೇಶ ವಾಲಿ, ಪ್ರಾಚಾರ್ಯ ಕಿಶೋರಕುಮಾರ, ಉಪಪ್ರಾಚಾರ್ಯ ಎಸ್.ಡಿ.ಕರಜಗಿ, ಶಿಕ್ಷಕರಾದ ಸಿ.ವ್ಹಿ.ಮೆಣಸಿನಕಾಯಿ, ಆರ್.ಬಿ.ದಾನಿ, ರವಿ ಬೂದಿಹಾಳ, ಆರ್.ಜಿ.ರಾಠೋಡ, ಎಸ್.ಆಯ್.ಬೇರಗಿ, ವೀರೇಶ ಮೇಟಿ, ಶಶಿಕುಮಾರ, ಮೈನು ತಾಳಿಕೋಟೆ, ಸೈದಪ್ಪ ಮುಂತಾದವರು ಉಪಸ್ಥಿತರಿದ್ದರು.