ಹೂವಿನ ಹಡಗಲಿ

ಮೈಲಾರ-ಸೇತುವೆ ಕುಸಿತದ ಭಯ: ಆತಂಕದಲ್ಲಿ ಜನ; ದುರಸ್ತಿಗೆ ಒತ್ತಾಯ

ಮೈಲಾರ-ಸೇತುವೆ ಕುಸಿತದ ಭಯ: ಆತಂಕದಲ್ಲಿ ಜನ; ದುರಸ್ತಿಗೆ ಒತ್ತಾಯ

ಹೂವಿನಹಡಗಲಿ  17:ತಾಲ್ಲೂಕಿನ ಮೈಲಾರ-  ಬಳಿ ತುಂಗಭದ್ರಾ  ನದಿಯ ಹಳೆ ಸೇತುವೆ ದುರಸ್ತಿ ಮಾಡಬೇಕೆಂದು ವಿಜಯನಗರಜಿಲ್ಲೆಯ ಬಿಜೆಪಿ ಮುಖಂಡ ಎಂ.ಬಿ.ಬಸವರಾಜ ಒತ್ತಾಯಿಸಿದ್ದಾರೆ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಕೊಂಡಿಯಾದ 52ವರ್ಷದ ಹಳೆಯದಾದ ಸೇತುವೆ ಅವನತಿಯತ್ತ ಸಾಗುತ್ತದೆ. ಈ ಸೇತುವೆ ಮೇಲೆ ಭಾರಿ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚಾರಿಸುತ್ತಿದ್ದು ಅಪಾಯ ಸಂಭವಿಸುವ ಸಾಧ್ಯತೆ ಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಸಂಬಂಧಪಟ್ಟ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಸಂಪರ್ಕಕೊಂಡಿಯಾಗಿರುವ, ಮೈಲಾರ-ಕಂಚರಗಟ್ಟಿ ಬಳಿಯ ತುಂಗಭದ್ರಾ ಸೇತುವೆ ನಿರ್ಮಾಣಗೊಂಡು ಬರೊಬ್ಬರಿ 52 ವರ್ಷವಾಗಿದೆ. ಈ ಸೇತುವೆ ಇತ್ತ ವಿಜಯನಗರ, ಬಳ್ಳಾರಿ, ದಾವಣಗೆರೆ, ಅತ್ತ ಹಾವೇರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇತರ ಅಕ್ಕಪಕ್ಕದ ಜಿಲ್ಲೆಗಳಿಗೆ ಸಂಪರ್ಕಕೊಂಡಿಯಾಗಿದೆ.ಆದರೆ ದುರಸ್ತಿಗೆ ಅಗತ್ಯ ಅನುದಾನ ಇಲ್ಲದೇ ಅವಸಾನದತ್ತ  ಸಾಗಿದೆ ಕೂಡಲೇ ಅನುದಾನ ನೀಡಿ ದುರಸ್ತಿ ಮಾಡಬೇಕೆಂದು ಎಂ.ಬಿ.ಬಸವರಾಜ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ