ಗುರವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ
ತಾಳಿಕೋಟೆ21: ವಿವಿಧ ಬೇಡಿಕೆಗಳ ಈಡೇರಿಸುವಂತೆ ಪಟ್ಟಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ಸ್ಪಂಧಿಸದ ಹಿನ್ನಲೆಯಲ್ಲಿ ಇಂದಿನಿಂದ ಗುರವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಕೊಳ್ಳಲು ತಿರ್ಮಾನಿಸಲಾಗಿದೆ.
ಹಡಗಿನಾಳ ರಸ್ತೆಯ ಡೋಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ರಸ್ತೆಯನ್ನು ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಾಣ ಮಾಡಬೇಕು. ಪಟ್ಟಣದ ಪುರಸಭೆಯಲ್ಲಿ ನಡೆದ ಅಕ್ರಮಗಳ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಕೊಳ್ಳಬೇಕು ಹಾಗೂ ಪುರಸಭೆ ಆಸ್ತಿಗಳನ್ನು ಮತ್ತೆ ಪುರಸಭೆಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ದಿ.11 ರಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಸತ್ಯಾಗ್ರಹ 10 ನೇ ದಿನ ಪೂರ್ಣಗೊಂಡಿದೆ. ಅಧಿಕಾರಿಗಳು ಸ್ಪಂದಿಸದ ಹಿನ್ನಲೆಯಲ್ಲಿ ನಾಳೆಯಿಂದ ಗುರವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಕೊಳ್ಳಲಾಗುತ್ತಿದೆ ಎಂದು ಹೋರಾಟ ಸಮಿತಿ ಅದ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷ ಸುಭಾಸ ಗೌಡಗೇರಿ, ಸುರೇಶ ಹಜೇರಿ, ಸುರೇಶ ಅಮರಸಿಂಗ ಹಜೇರಿ, ನದೀಂ ಕಡು, ಪತ್ತೆಮಹಮ್ಮದ ನಾಯ್ಕೋಡಿ, ನಿಂಗನಗೌಡ ದೇಸಾಯಿ, ಕೆ.ಎಚ್.ಪಾಟೀಲ, ರಮೇಶ ಮೋಹಿತೆ, ಚಂದ್ರಶೇಖರ ಮಠಪತಿ, ಮಲಕಾಜಿ ಮದರಿ, ಅಶೋಕ ವಠಾರ ಸೇರಿದಂತೆ ಇತರರು ಇದ್ದರು.