ರಾಣೆಬೆನ್ನೂರ

ರೈತರಿಂದ ರೈತರಿಗಾಗಿ ಇರುವ ಕಂಪನಿ: ಕೇಶವ ಮೂತರ್ಿ

ರೈತರಿಂದ ರೈತರಿಗಾಗಿ ಇರುವ ಕಂಪನಿ: ಕೇಶವ ಮೂತರ್ಿ

ಲೋಕದರ್ಶನ ವರದಿ

ರಾಣಿಬೆನ್ನೂರು 26:  ತಾಲೂಕಿನ ದಂಡಗಿಹಳ್ಳಿಯಲ್ಲಿಜಲಾನಯನಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮರಳುಸಿದ್ದೇಶ್ವರ ರೈತ ಉತ್ಪಾದ ಕಕಂಪನಿಯ ಷೇರು ಸದಸ್ಯರಿಗೆ ಹಾಗೂ ಪ್ರಮುಖ ರೈತರಿಗೆ ರೈತಉತ್ಪಾದಕ ಕಂಪನಿಗಳ ಮಾಹಿತಿ ಸಭೆಯನ್ನುಆಯೋಜನೆ ಮಾಡಲಾಗಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದದ ಕೃಷಿ ಅಧಿಕಾರಿ ಕೇಶವ ಮೂತರ್ಿಯವರು ಉದ್ಘಾಟಿಸಿ ಮಾತನಾಡಿದ ಅವರು ರೈತಉತ್ಪಾದಕ ಕಂಪನಿಯ ರಚನೆ, ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ವಿವರಿಸುತ್ತಾ ರೈತ ಉತ್ಪಾದಕ ಕಂಪನಿಯ ಮೂಲ ಭಾಗವಾದಷೇರುದಾರರು ಹೆಚ್ಚಿನ ಮುತುವಜರ್ಿ ವಹಿಸಿದರೆ ಕಂಪನಿಯ ಅಭಿವೃದ್ಧಿ ಸಾಧ್ಯ, ರೈತಉತ್ಪಾದಕ ಕಂಪನಿಯು ರೈತರಿಂದಲೇ ಸ್ಥಾಪಿತವಾಗಿದ್ದು, ಕಂಪನಿಯ ಅಭಿವೃದ್ಧಿ ಆಗಬೇಕಾದರೇ ರೈತ ಬಾಂಧವರು, ನಿದರ್ೇಶಕರ ಪಾತ್ರ ಮಹತ್ವವಾಗಿರುತ್ತದೆ. ರೈತರು ತಮಗಾಗಿ ತಾವೇ ರಚಿಸಿಕೊಂಡ ಕಂಪನಿಯನ್ನು ತಾವೇ ಅಭಿವೃದ್ಧಿ ಗೊಳಿಸಬೇಕಾಗುತ್ತದೆ. ಎಂದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂಪನಿಯಅಧ್ಯಕ್ಷರಾದ ಶಂಕ್ರಪ್ಪ ಮೆಣಸಿನಹಾಳ ಇವರು ಮಾತನಾಡಿ ಕೃಷಿ ಉತ್ಪಾನ್ನಗಳಿಗೆ ಮರಳುಸಿದ್ದೇಶ್ವರ ರೈತಉತ್ಪಾದಕ ಕಂಪನಿಯಿಂದ ಸದಸ್ಯ ರೈತರಿಗೆ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಉತ್ತಮ ರೀತಿಯಲ್ಲಿ ಮಾರುಕಟ್ಟೆಯನ್ನು ಕಲ್ಪಿಸಿ ರೈತರಿಗೆ ಉತ್ತಮ ಲಾಭದಾಯಕ ಕೃಷಿ ಪದ್ದತಿಯನ್ನು ಕಲ್ಪಸಿಕೊಡಬೇಕಾದ ಉದ್ದೇಶವನ್ನು ಹೊಂದಲಾಗಿರುತ್ತದೆ. ರೈತರಿಗೆ ಅವಶ್ಯವಿರುವ ಎಲ್ಲಾ ರೀತಿಯ ಸೌಕರ್ಯಗಳು ರೈತ ಉತ್ಪಾದಕ ಕಂಪನಿಗಳಿಂದ ಮುಂದಿನ ದಿನಗಳಲ್ಲಿ ಕಲ್ಪಸಿಕೊಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ನಿದರ್ೇಶಕರು, ಸಿಬ್ಬಂದಿಗಳು ಹಾಗೂ 50ಕ್ಕೂ ಹೆಚ್ಚಿನ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ