ತಾಳಿಕೋಟಿ

ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ ಸೋಮನಗೌಡ

ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ ಸೋಮನಗೌಡ

ತಾಳಿಕೋಟಿ26:  ನಮ್ಮ ರೈತರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು. 

ಇತ್ತೀಚಿಗೆ ಮತಕ್ಷೇತ್ರದ ದೇ. ಹಿಪ್ಪರಗಿಯಲ್ಲಿ ಕೆರೆ ತುಂಬುವ ಭೂಮಿ ಪೂಜಾ ಸಮಾರಂಭದಲ್ಲಿ ಕರ್ನಾಟಕ ರೈತ ಮೋರ್ಚಾವತಿಯಿಂದ ಹೊರತಂದ ‘ಸದೃಡ ರೈತ-ಸಶಕ್ತ ಭಾರತ’ ಕರಪತ್ರ ಬಿಡುಗೊಳಿಸಿ ಮಾತನಾಡಿದ ಅವರು ದೇಶದ 50 ವರ್ಷಗಳ ಇತಿಹಾಸದಲ್ಲಿಯೇ ಹಿಂದೆ ಯಾವ ಸರಕಾರವು ಜಾರಿಗೆ ತರದಂತಹ ರೈತ ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಿದೆ ಇದರ ಸಂಪೂರ್ಣ ಸದುಪಯೋಗವನ್ನು ನನ್ನ ಕ್ಷೇತ್ರದ ರೈತರು ಮಾಡಿಕೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮಸಬಿನಾಳ ರೈತ ಮುಖಂಡರಾದ ಅಜೀಜ್ ಎಲಿಗಾರ ಕಾಶಿನಾಥ ತರಕೇರಿ, ರವಿ ಪಾಟೀಲ(ಗುತ್ತಿಗೆದಾರ) ಮಂಡಲ ಕಾರ್ಯದರ್ಶಿ ಭೀಮನಗೌಡ ಲಚ್ಯಾಣ, ಮಕ್ತುಮಸಾಬ ಬೇಪಾರಿ, ಸಂಗನಗೌಡ ಬಿರಾದಾರ, ಪ್ರಭುಗೌಡ ದೊಡ್ಡಿಮನಿ ಇದ್ದರು. 


ಸುದ್ದಿ ಓದಿ