ಶಿಗ್ಗಾವ್

ರೈತರು ಆತ್ಮಸ್ಥೈರ್ಯ ಕಳಕೊಳ್ಳಬಾರದು: ಸಚಿವ ಪಾಟೀಲ

ರೈತರು ಆತ್ಮಸ್ಥೈರ್ಯ ಕಳಕೊಳ್ಳಬಾರದು: ಸಚಿವ ಪಾಟೀಲ

ಲೋಕದರ್ಶನ ವರದಿ 


ಶಿಗ್ಗಾವಿ 27: ವಾಡಿಕೆಯಂತೆ  782 ಮಿ,ಮೀ ಮಳೆ ಆಗಬೇಕಿತ್ತು, ಆದರೆ 984 ಮಿ,ಮೀ ಮಳೆ ಹೆಚ್ಚಾಗಿದೆ ಹೀಗಾಗಿ ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ನಷ್ಟವಾಗಿದ್ದು, ಇಷ್ಟು ಬೆಳೆ ಯಾವಾಗಲೂ ರೈತರಿಗೆ ನಾಶವಾಗಿಲ್ಲಾ, ಧನಕರುಗಳಿಗೆ ಮೇವು ಕೂಡಾ ಸಿಗದಷ್ಟು ಹಾನಿಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. 

ಇತ್ತೀಚೆಗೆ ಅಕಾಲಿಕ ಮಳೆಯಿಂದ ಹಾನಿಯಾದ ತಾಲೂಕಿನ ತಡಸ, ಶ್ಯಾಡಂಬಿ, ತಿಮ್ಮಾಪೂರ, ಹೊಸೂರ ಸೇರಿದಂತೆ ಶಿಗ್ಗಾವಿಯಲ್ಲಿ ಬೆಳೆಗಳನ್ನು ವೀಕ್ಷಣೆ ಮಾಡಿ ನಂತರ ್ಲ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಭತ್ತ 4375 ಹೆಕ್ಟೇರ್, ಗೋವಿನಜೋಳ 1350 ಹೆಕ್ಟೇರ್, ಹತ್ತಿ 4335 ಹೆಕ್ಟೇರ್ ನಷ್ಟು ಬೆಳೆಗಳು ಹಾಳಾಗಿವೆ ಎಂದರು. 

ಜಿಲ್ಲೆಯಲ್ಲಿ ಭತ್ತ 11,907 ಹೆಕ್ಟೇರ್ ನಷ್ಟು ಹಾಳಾಗಿದೆ, 28 ಸಾವಿರ ಹೆಕ್ಟೇರ್ ನಷ್ಟು ಮೆಕ್ಕೆಜೋಳ ಹಾಳಾಗಿದೆ, 5 ಸಾವಿರ ಹೆಕ್ಟೇರ್ ನಷ್ಟು ಹತ್ತಿ ಬೆಳೆ ಹಾಳಾಗಿದೆ, ಒಟ್ಟು 45,545 ಸಾವಿರ ಹೆಕ್ಟರ್ ನಷ್ಟು ಹಾನಿ ಆಗಿದೆ ಎಂದರು. 

ರಾಜ್ಯದಲ್ಲಿ ಒಟ್ಟು 11 ಲಕ್ಷದಷ್ಟು ಹೆಕ್ಟೇರ್ ನಲ್ಲಿ ಬೆಳೆಗಳು ಹಾಳಾಗಿದಾವೆ, 30 ನೇ ದಿನಾಂಕವರೆಗೂ ಸಮೀಕ್ಷೆ ಮಾಡಲಿಕ್ಕೆ ಅವಕಾಶ ನೀಡಿದೆ, ಬೆಳೆ ನಷ್ಟ ಆಗಿದ್ದಕ್ಕೆ ಒಂದನೇ ತಾರೀಖಿನ ಮೇಲೆ ರಾಜ್ಯದಲ್ಲಿ ಪರಿಹಾರ, ಅರ್ಜಿ ಸಲ್ಲಿಸಲು ಇನ್ನೂ ನಾಲ್ಕು ದಿನ ವೇಳೆ ಇದೆ, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮುಂದುವರೆಸಲು ಯೋಚಿಸುತ್ತೇವೆ, ಬೆಳೆ ಹಾನಿ ಪರಿಹಾರದ ಅರ್ಜಿ ಸಲ್ಲಿಸಲಿಕ್ಕೆ ಅವಕಾಶದ ಬಗ್ಗೆ ವಿಚಾರ ಮಾಡುತ್ತೇವೆ ಎಂದರು. 

ರೈತರು ಆತ್ಮಸ್ಥೈರ್ಯ ಕಳಕೊಳ್ಳಬಾರದು : ನಿಮ್ಮ ಜೊತೆ ನಾವಿದ್ದೇವೆ ಸರ್ಕಾರ ಕೂಡಾ ಇದೆ, ರೈತರು ಅದೈರ್ಯಗೆಡುವ ಅವಶ್ಯಕತೆಯಿಲ್ಲ ಎಂದು ದೈರ್ಯ ಹೇಳಿದರು, ರಾಜ್ಯದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ ಕುರಿತು ಪ್ರತಿಕ್ರೀಯೆ ನೀಡಿದ ಸಚಿವರು, ಮಾಡಲಿ, ಅವರದೇನು ಬೇಡಿಕೆ ಇದೆ ಅದನ್ನು ನೊಡೊಣ, ಭೇಟಿಯಾಗಿ ಮನವಿ ಕೊಡಲಿ ಪರೀಶೀಲನೆ ಮಾಡೋಣ ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸನಗೌಡ್ರ ರಾಮನಗೌಡ್ರ, ರೈತ ಸಂಘದ ಅದ್ಯಕ್ಷರುಗಳಾದ ಬಸಲಿಂಗಪ್ಪ ನರಗುಂದ, ಮುತ್ತಪ್ಪ ಗುಡಗೇರಿ, ಮಂಜುನಾಥ ಹಾವೇರಿ, ಶಂಕರಗೌಡ ಪಾಟೀಲ, ಬಸಣ್ಣ ಹಾವೇರಿ, ಸಂತೋಷ ಕಟಗಿ ಸೇರಿದಂತೆ ರೈತ ಮುಖಂಡರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು  ಮತ್ತು ಸಿಬ್ಬಂದಿ ರೈತರು ಇದ್ದರು. 


ಸುದ್ದಿ ಓದಿ