ಯರಗಟ್ಟಿ

ಕೆಇಬಿಗೆ ಮುತ್ತಿಗೆ ಹಾಕಿ, ಟೈಯರಗೆ ಬೆಂಕಿ ಹಚ್ಚಿ ರೈತರ ಪ್ರತಿಭಟನೆ

ಕೆಇಬಿಗೆ ಮುತ್ತಿಗೆ ಹಾಕಿ, ಟೈಯರಗೆ ಬೆಂಕಿ ಹಚ್ಚಿ ರೈತರ ಪ್ರತಿಭಟನೆ

ಯರಗಟ್ಟಿ 26: ಸಮರ​‍್ಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಯರಗಟ್ಟಿ, ರೈನಾಪುರ, ಆಲದಕಟ್ಟಿ, ಬೂದಿಗೊಪ್ಪ ಹಾಗೂ ಸುತ್ತಲಿನ ಗ್ರಾಮಗಳ ರೈತರು ಗುರುವಾರ ಯರಗಟ್ಟಿ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಪ್ರತಿಭಟಿಸಿದರು. 

ಸರಿಯಾದ ಮಳೆ ಇಲ್ಲದೆ ನಮ್ಮ ಬೆಳೆಗಳು ಒಣಗುತ್ತಿವೆ. ಸದ್ಯ ಅಲ್ಪಸ್ವಲ್ಪ ಇದ್ದ ಬೆಳೆಯನ್ನು ಬದುಕಿಸಲು ನೀರು ಸಾಕಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಕಾಲಾವಧಿ ವಿದ್ಯುತ್ ಪೂರೈಕೆ ಜೋತೆಗೆ ಸಿಂಗಲ್ ಪೇಸ್ ವಿದ್ಯುತ ಒದಗಿಸಬೇಕು ಎಂದು ಒತ್ತಾಯಿಸಿ ಯರಗಟ್ಟಿಯ ಹೆಸ್ಕಾಂ ಕಚೇರಿ ಮುಂಬಾಗದಲ್ಲಿ ಟೈಯರಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತ ರೈತರು ಕಚೇರಿ ಮುಂದೆ ಉಪ್ಪಿಟು ಮಾಡಿ ಮಧ್ಯಾಹ್ನದ ವರೆಗೆ ಬಿಗಿ ಪಟ್ಟು ಹಿಡಿದರು. ಯರಗಟ್ಟಿ ಗ್ರೀಡ್‌ನಿಂದ ಬೆಳಿಗ್ಗೆಯಿಂದ ಎಲ್ಲಿಯೂ ವಿದ್ಯುತ್ ಪೂರೈಕೆಯಾಗದಂತೆ ಬಂದ್ ಮಾಡಿಸಿದ್ದರು. 

ಸ್ಥಳಕ್ಕೆ ಆಗಮೀಸಿದ ಹೆಸ್ಕಾಂ ಎಇಇ ಮಹೇಂದ್ರ ವಿಶಾಲಪೂರಕರ್ ರೈತರ ಬೇಡಿಕೆಗಳನ್ನು ಆಲಿಸಿದರು. ಸದ್ಯ ಸಿಂಗಲ್ ಪೇಸ್‌ನಲ್ಲಿ ವಿದ್ಯುತ್ ಒದಗಿಸಲು ಸಾಧ್ಯವಿಲ್ಲ. ರಾತ್ರಿ ವೇಳೆ ನೀಡಲಾಗುತ್ತಿದ್ದ ವಿದ್ಯುತ್‌ನ್ನು ಸಮಯ ಬದಲಾಯಿಸಿ 7 ಘಂಟೆ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.  

ವೆಂಕಟೇಶ ಪಾಟೀಲ, ಗೀರೀಶ ಪಾಟೀಲ, ಗೋವಿಂದ ದೇವರಡ್ಡಿ, ಗೀರೀಶ ದೇವರಡ್ಡಿ, ಫೈಗಂಬರ್ ನಧಾಪ್, ಸಂತೋಷ ದೇವರಡ್ಡಿ, ವೆಂಕಟೇಶ ವಜ್ರಮಟ್ಟಿ, ಮಲ್ಲಿಕಾರ್ಜುನ ವಜ್ರಮಟ್ಟಿ, ಫಕೀರ​‍್ಪ ಕಾಮನ್ನವರ, ಕೃಷ್ಣಪ್ಪ ಮಿಕಲಿ, ಮಲ್ಲಿಕಾರ್ಜುನ ಮಠಪತಿ, ಮೌನೇಶ ಹಳ್ಳಂಡಿ, ರಮೇಶ ಕರಿಗನ್ನವರ ಇತರರು ಇದ್ದರು. 


ಸುದ್ದಿ ಓದಿ