ಕೃಷಿಕರಿಗೆ ಬ್ಯಾಂಕ್ ಸೌಲಭ್ಯ ಅಗತ್ಯ : ಡಿವೈಎಸ್ಪಿ ಟಿ.ಮಂಜುನಾಥ
Farmers need bank facilities: DySP T. Manjunath
ಕಂಪ್ಲಿ 20.: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯನ್ನು ಪೊಲೀಸ್ ಇಲಾಖೆಯ ಡಿವೈಎಸ್ಪಿ ಟಿ.ಮಂಜುನಾಥ ಇವರು ಶುಭ ಶುಕ್ರವಾರದಂದು ಉದ್ಘಾಟಿಸಿದರು.
ನಂತರ ಮಂಜುನಾಥ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಎರಡನೇ ಶಾಖೆಯಾಗಿ ಬ್ಯಾಂಕ್ ಆರಂಭಗೊಂಡಿದೆ. ವಿಶ್ವದಲ್ಲಿ ಒಂಬತ್ತು ಸಾವಿರ ಬರೋಡಾ ಬ್ಯಾಂಕ್‌ಗಳಿದ್ದು, ಕರ್ನಾಟಕದಲ್ಲಿ 700 ಶಾಖೆಗಳನ್ನು ಹೊಂದಿದೆ. ಗ್ರಾಹಕರಿಗೆ ಉತ್ತಮವಾಗಿ ಸೇವೆ ನೀಡುತ್ತಿದೆ. ಈ ಭಾಗದಲ್ಲಿ ಅತಿ ಹೆಚ್ಚಾಗಿ ಕೃಷಿಕರಿದ್ದು, ಮತ್ತು ಪ್ರವಾಸಿಗಳ ತಾಣವು ಕೂಡ ಹೌದು. ಆದ್ದರಿಂದ ಇಲ್ಲಿನ ಕೃಷಿಕರಿಗೆ ಬ್ಯಾಂಕ್ ಸೌಲಭ್ಯ ಅಗತ್ಯವಾಗಿದೆ. ಬ್ಯಾಂಕ್ ಸೌಲಭ್ಯದೊಂದಿಗೆ ಜನರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಎಜಿಎಂ ಅಮರೇಶ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ದೇಶದಲ್ಲಿ ಸಾಕಷ್ಡು ಶಾಲೆಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಲಾಗುತ್ತಿದೆ. ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ಶಾಖೆಯನ್ನು ಆರಂಭಿಸಲಾಗಿದೆ. ಗ್ರಾಹಕರ ಸ್ನೇಹಿಗಳಾಗಿ ಕಟ್ಟ ಕಡೆಯ ಗ್ರಾಹಕರಿಗೆ ಸೇವೆ ಒದಗಿಸಬೇಕು. ಬ್ಯಾಂಕ್ ಅಭಿವೃದ್ಧಿ ಜತೆಗೆ ಗ್ರಾಹಕರ ಅಭಿವೃದ್ಧಿ ಅಷ್ಟೇ ಮುಖ್ಯವಾಗಿದೆ. ಬ್ಯಾಂಕ್ ಗಳು ಸೂಪರ್ ಮಾರ್ಕೆಟ್ ಆಗಿವೆ. ಎಲ್ಲಾ ಸೌಲಭ್ಯಗಳು ಪ್ರತಿಯೊಬ್ಬರಿಗೂ ದೊರಕಲಿವೆ ಎಂದರು.
ಶಾಖೆ ವ್ಯವಸ್ಥಾಪಕ ಚಂದ್ರಶೇಖರ ಮಾತನಾಡಿ, ಈ ಭಾಗದ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬರೋಡಾ ಶಾಖೆ ಆರಂಭಿಸಲಾಗಿದೆ. ಜನತೆಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೇವೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಜಿಎಂ ಶ್ರೀಹರಿ, ಗ್ರಾಪಂ ಉಪಾಧ್ಯಕ್ಷೆ ರಾಮದೇವಿ, ಪಿಡಿಒ ರಾಜೇಶ್ವರಿ, ಮುಖಂಡ ವೀರಭದ್ರ್ಪ, ಸಿಬ್ಬಂದಿಗಳಾದ ವಿನೋದ, ಓಂಪ್ರಕಾಶ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಹಕರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 