ರೈತರಿಗೆ ಆರು ಘಂಟೆ ತ್ರಿಪಿಸ್ ವಿದ್ಯುತ್ ಸರಬರಾಜಿಗೆ ಆಗ್ರಹ
ಸಂಬರಗಿ 20: ಗಡಿ ಭಾಗದ ಗ್ರಾಮಗಳಲ್ಲಿ ಜಂಬಗಿ ವಿದ್ಯುತ್ ಹೆಸ್ಕಾಂದಿಂದ ರೈತರಿಗೆ ಆರು ಘಂಟೆ ತ್ರಿಪಿಸ್ ವಿದ್ಯುತ್ ಸರಬರಾಜು ಮಾಡಬೇಕು ಇಲ್ಲವಾದರೆ ಹೋರಾಟ ಮಾಡಲಾಗುವದೆಂದು ಕರವೇ ಅಥಣಿ ತಾಲೂಕಾ ಅಧ್ಯಕ್ಷ ಬಸನಗೌಡ ಪಾಟೀಲ ಎಚ್ಚರಿಸಿದರು.
ಜಂಬಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಧ್ಯದಲ್ಲಿ ರೈತರ ತೆರೆದ ಭಾವಿ ಹಾಗೂ ಕೊಳುವೆ ಬಾವಿಗೆ ಸ್ವಲ್ಪ ಮಟ್ಟಿಗೆ ನೀರಿದ್ದು ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ರೈತರಿಗೆ ತಮ್ಮ ಬೆಳೆಗೆ ನೀರು ಪೂರೈಕೆ ಮಾಡಲು ಅಸಾಧ್ಯವಾಗುತ್ತಿದೆ ನೀರಿಲ್ಲದೆ ಬೆಳೆ ಬತ್ತು ಹೊಗ್ತಾ ಇದೆ ಆ ಕಾರಣ ರೈತರು ಕಂಗಾಲಾಗುತಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಆರು ಘಂಟೆ ವಿದ್ಯುತ್ ಸರಭರಾಜು ಮಾಡಬೇಕು ಇಲ್ಲವಾದರೆ ಹೆಸ್ಕಾಂ ಕಾರ್ಯಲಯದ ಮುಂದೆ ಪ್ರತಿಭಟಣೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಕೃಷ್ಣಾ ನಾಯ್ಕ, ಆನಂದ ಜಾಧವ, ಶಿವಾಜಿ ನಾಯ್ಕ ಉಪಸ್ಥಿರಿದ್ದರು.