ಶಿಗ್ಗಾವ್

ರೈತರು ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆ: ಆಕ್ರೋಶ

ರೈತರು ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆ: ಆಕ್ರೋಶ

ಶಿಗ್ಗಾವಿ 11: ಕಳೆದ ಕೆಲವು ದಿನಗಳಲ್ಲಿ  ಹಾವೇರಿ ಜಿಲ್ಲೆಯಲ್ಲಿ ಸುಮಾರು ರೈತರು ಹಲವಾರು ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತಸೇನಾ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಸರಕಾರದ ವಿರುದ್ಧ ಹರಿಹಾಯ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೃಷಿ ಸಚಿವರ ತವರು ಜಿಲ್ಲೆಯಲ್ಲಿ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕಾರಣ ಕೃಷಿಗಾಗಿ ಮಾಡಿರುವ ಸಾಲ ಲಾಕಡೌನನಿಂದಾದ ನಷ್ಟ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಾರ್ವಜನಿಕರ ಅಭಿಪ್ರಾಯ ಆದಕಾರಣ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಮರಣಹೊಂದಿದ ರೈತರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡುವುದರ ಜೊತೆಗೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಮರಕಳಿಸದಂತೆ ಮುಂಜಾಗ್ರತೆವಹಿಸಬೇಕು ಎಂದು ಆಗ್ರಹಿಸಿದರು. 


ಸುದ್ದಿ ಓದಿ