ಸಹಕಾರ ಸಂಘಕ್ಕೆ ರೈತರೇ ಜೀವಾಳ: ಅಧ್ಯಕ್ಷ ಕಣಮೇಶ್ವರ
ಸಿಂದಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಳೆಯಲು ರೈತರ ಸಹಕಾರ ಮುಖ್ಯ ಹಾಗೂ ಸಂಘಕ್ಕೆ ರೈತರೇ ಜೀವಾಳ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಕಣಮೇಶ್ವರ ಹೇಳಿದರು.
ಆಲಮೇಲ ತಾಲೂಕಿನ ದೆವಣಗಾಂವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.
ದೇವಣಗಾಂವ ಸುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಗ್ರಾಮದಲ್ಲಿ ನೂತನ ಪಿಎಲ್ಡಿ ಬ್ಯಾಂಕ್ ಶಾಖೆ ತೆರೆಯಬೇಕೆಂದು ಜಿಲ್ಲಾಧ್ಯಕ್ಷ ಶಿವಾನಂದ ಪಾಟೀಲರಿಗೆ ಒತ್ತಾಯಿಸಲಾಗಿದೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಕೆವಿಜಿಬಿ ಬ್ಯಾಂಕ್ ವ್ಯವಸ್ಥಾಪಕ ಅಸ್ಮತ ಚಿನ್ನಕೋಟಿ ಮಾತನಾಡಿ ರೈತರು ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಸಾಲ ತಗೆದು ಕೊಂಡು ಅಷ್ಟೆ ಜವಾಬ್ದಾರಿಯಿಂದ ಮರುಪಾವತಿ ಮಾಡಬೇಕು ಅಂದಾಗ ಬ್ಯಾಂಕ್ ಮತ್ತು ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ವೇ.ಈರಯ್ಯ ಮಠ ಸಾನಿಧ್ಯ ವಹಿಸಿದ್ದರು. ಜಿಪಂಮಾಜಿ ಸದಸ್ಯ ಸಂಘದ ಉಪಾಧ್ಯಕ್ಷ ಕಾಶಿನಾಥ ಗಂಗನಳ್ಳಿ, ಈರಣ್ಣ ಕಲಶೆಟ್ಟಿ, ಶಂಕರಲಿಂಗ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ಗಾಲೀಬ ಸೋಮನಾಯಕ, ರವೀಂದ್ರ ಕಲಶೆಟ್ಟಿ, ಸಾಯಬಣ್ಣ ನಾಗಠಾಣ, ಬಸಪ್ಪ ದಾನೇನವರ, ಶ್ರೀದೇವಿ ಗಂಗನಳ್ಳಿ, ಅನ್ನಪೂರ್ಣ ಕುಂಬಾರ ಸಿಇಓ ಮಂಜುಳಾ ಬಿರಾದಾರ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪೂರ, ಯಲ್ಲಪ್ಪ ತಳವಾರ, ಮುತ್ತು ಕಲಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.