ಸಿರುಗುಪ್ಪ

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ


ಲೋಕದರ್ಶನ ವರದಿ 

ಸಿರುಗುಪ್ಪ 02: ತಾಲ್ಲೂಕು ಸಂಯುಕ್ತಾ ಕಿಸಾನ್ ಹೋರಾಟ ಸಮಿತಿ ಹಾಗೂ ರೈತರಿಂದ  ಸಿರುಗುಪ್ಪದಲ್ಲಿ  ಪ್ರತಿಭಟನೆ ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳದಿರುವ ಘಟನೆ ಇಡೀ ಸಮೂದಯ ಹಾಗೂ ಕರ್ನಾಕಟ ಕರ್ನಾಟಕದ ಸಂಸ್ಕೃತಿಗೆ ಮಾಡಿದ ಅಪಮಾನ ವಿರೋಧಿಸಿ ಈ ಘಟನೆಯನ್ನು ಕರ್ನಾಟಕದ ರೈತರ ಸಮೂದಾಯದ ಹಾಗೂ ನಾಗರಿಕರು ಮತ್ತು ವಿವಿಧ  ಸಂಘಟನೆಗಳು  ತೀವ್ರವಾಗಿ ಖಂಡಿಸುತ್ತೇವೆ ಎಂದು  ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಬಿ ಸುರೇಶ ಸರ್ದಾರ್ ಕನಕರಾಜ ನಾಗರಾಜ ಓಬಳೇಶಪ್ಪ ಸುರೇಶ ಬಿ ಎಲ್ ಈರಣ್ಣ ರಾಮಪ್ಪ ಮುಂತಾದವರು ಭಾಗವಹಿಸಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ ಎನ್ ಆರ್ ಮಂಜುನಾಥ ಸ್ವಾಮಿ ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿಪತ್ರ ಸಲ್ಲಿಸಿದರು  ಇಂತಹ ಗುಂಡಾ ವರ್ತನೆಯನ್ನು ಸರ್ಕಾರ ನಿಲ್ಲಿಸಬೇಕು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ತಕ್ಕ  ಶಿಕ್ಷೆಯನ್ನು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಸಂಯುಕ್ತ ಕಿಸಾನ್  ಹೋರಾಟ ಸಮಿತಿಯವರು  ಒತ್ತಾಯಿಸಿದರು. 


ಸುದ್ದಿ ಓದಿ