ರಾಣೆಬೆನ್ನೂರ

ಆಗಸ್ಟ್‌ 25ರಂದು ರಾಣೇಬೆನ್ನೂರಲ್ಲಿ ರೈತರ ಪ್ರತಿಭಟನೆ

ಆಗಸ್ಟ್‌ 25ರಂದು ರಾಣೇಬೆನ್ನೂರಲ್ಲಿ ರೈತರ ಪ್ರತಿಭಟನೆ

ರಾಣೆಬೆನ್ನೂರು 23:  ಬೆಳೆವಿಮೆಯಲ್ಲಿ ಆಗಿರುವ ಅನ್ಯಾಯ, ಧ್ವನಿಯೆತ್ತುವ ರೈತ ಹೋರಾಟಗಾರರ ಮೇಲೆ ಅನಾವಶ್ಯಕವಾಗಿ ಪೊಲೀಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ ಹೋರಾಟಗಾರ, ಧ್ವನಿ ಅಡಗಿಸಲು ಹೊರಟಿರುವ ಬಿಜೆಪಿ ಸರಕಾರದ ದ್ವಂದ್ವ ನೀತಿಯನ್ನು, ವಿರೋಧಿಸಿ ಆಗಸ್ಟ್‌ 25ರಂದು ರಾಣಿಬೆನ್ನೂರು ನಗರದಲ್ಲಿ  ರೈತರ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ, ಕರ್ನಾಟಕ ರಾಜ್ಯ ರೈತ ಸಂಘದ  ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಂದ್ರ ಗೌಡ ಪಾಟೀಲ್ ಅವರು ಹೇಳಿದ್ದಾರೆ. ಸೋಮವಾರ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ತವರು ಜಿಲ್ಲೆಯಲ್ಲಿ, ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಪ್ರತಿಭಟಿಸಲು ಮುಂದಾದರೆ, ಸರಕಾರ ಧ್ವನಿ ಅಡಗಿಸಲು ಮುಂದಾಗುತ್ತದೆ  ಇದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಪಾಟೀಲ, 25ರಂದು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ  ಖುದ್ದು ಹಾಜರಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ, ಈರಣ್ಣ ಹಲಗೇರಿ, ಅಶೋಕ  ಗಂಗನಗೌಡ್ರ, ಸುರೇಶ್ ಮಲ್ಲಾಪುರ, ಬಸನಗೌಡ ಹುಲ್ಲತ್ತಿ, ಶಿವಾನಂದಪ್ಪ ಲಿಂಗದಹಳ್ಳಿ, ಪರ್ವತಗೌಡ ಕುಸುಗೂರು, ಸುರೇಶಪ್ಪ ಗರಡಿಮನಿ, ದಿಳ್ಳೇಪ್ಪಾ ಸತ್ಯಪ್ಪನವರ್, ಬಸವರಾಜ ಕೊಂಗಿ ಜಯಣ್ಣ ಮಾಗನೂರು, ನಾಗರಾಜ ಬಿ. ರಾಮನಗೌಡ ಪಾಟೀಲ, ಎಸ್‌. ಡಿ. ಹಿರೇಮಠ, ನಾಗರಾಜ ಸುರ್ವೇ, ಹರಿಹರ ಗೌಡ ಪಾಟೀಲ್,  ಸೇವೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರುಊ22-ಖಓಖ06-ನ್ಯೂಸ್ -ಫೋಟೋ 


ಸುದ್ದಿ ಓದಿ