ರಾಣೇಬೆನ್ನೂರಲ್ಲಿ ರೈತರ ಪ್ರತಿಭಟನೆ: ಸರಕಾರದ ವಿರುದ್ಧ ಮೊಳಗಿದ ಧಿಕ್ಕಾರದ ಘೋಷಣೆ
ರಾಣೆಬೆನ್ನೂರು 26: ರೈತರು ಬೆಳೆದ ಭತ್ತ ಕಬ್ಬು ಗೋವಿನ ಜೋಳ ಮತ್ತು ಆಹಾರ ಧಾನ್ಯಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು, ಭಾರಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಿ ಆಗ್ರಹಿಸಿದರು ಕೆಇಬಿ ವಿನಾಯಕ ದೇವಸ್ಥಾನದಿಂದ.ಭಾರಿ ರೈತ ಸಮುದಾಯದೊಂದಿಗೆ ಹೊರಟ ಪ್ರತಿಭಟನಾ ಮೆರವಣಿಗೆಯು, ಬಸ್ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ರಸ್ತೆತಡೆ ನಡೆಸಿ ಧರಣಿ ನಡೆಸಿದರು. ಪೊಲೀಸರ ಸರಾ್ಗವಲಿನಲ್ಲಿ ಹೊರಟ ಪ್ರತಿಭಟನಾಕಾರರು ಪ್ರಧಾನ ಅಂಚೆ ಕಚೇರಿ ಬಳಿ ಸಭೆ ನಡೆಸಲು ಮುಂದಾಗಿದ್ದರು, ಅಲ್ಲಿಯೇ ಶಾಸಕರ ಹುಟ್ಟುಹಬ್ಬದ ನಿಮಿತ್ತ ಹಾಕಲಾಗಿದ್ದ ಪೆಂಡಾಲ್ ನಿಂದ ಹೊರಸೂಸಿದ ಮೈಕ್ ಗದ್ದಲದಿಂದ ಕ್ಷಣಕಾಲ ಪರಸ್ಪರ ಸೂಕ್ಷ್ಮ ಗದ್ದಲ ಏರ್ಪಟಟಿದ್ದು ಆತಂಕಕ್ಕೆ ಕಾರಣವಾಗಿತ್ತು, ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾನಿರತರ ಮೆರವಣಿಗೆ ಮುಂದಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದರು. ಒಂದು ಕಡೆ ಬಿಜೆಪಿ ಶಾಸಕರ ಹುಟ್ಟುಹಬ್ಬದ ನಿಮಿತ್ತ ಏರ್ಾಡಾಗಿದ್ದ ಬೃಹತ್ ಬೈಕ್ ರಾಲಿ ಮತ್ತು ಇದೇ ಸಮಯದಲ್ಲಿ ನಡೆದ ರೈತರ ಪ್ರತಿಭಟನಾ ಮೆರವಣಿಗೆ.ಇಂದಾಗಿ ಪೊಲೀಸರು ಸಹ ಸುಗಮ ಸಂಚಾರ ಮಾಡಲು ಹರಸಾಹಸ ಪಡುವಂತಾಗಿತ್ತು. ಅಂತು ಇಂತು ಮಹಾತ್ಮ ಗಾಂಧಿ ರಸ್ತೆಯಿಂದ ಹೊರಟ ಮೆರವಣಿಗೆ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಸಿಲ್ದಾರ್ ಕಚೇರಿ ಎದುರುಗಡೆ ಜಮಾವಣೆಗೊಂಡು ಸಭೆಯಾಗಿ ಮಾರ್ಪಟಟಿತು. ಈ ಸಮಯದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು, ಓಟಿಎಸ್ ಅವರ ದಿನದ ಬ್ಯಾಂಕುಗಳು ರೈತರನ್ನು ಹೊರಗಿಟ್ಟಿವೆ. ಬೆಳೆ ವಿಮೆ, ಬೆಳೆ ಪರಿಹಾರ ರೈತರಿಗೆ ವಂಚನೆಯಾಗುತ್ತಿ ದೆ, ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ವಿಪರೀತವಾಗಿ ಏರಿಕೆಯಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡುವವರ ಮೇಲೆ ಅನಾವಶ್ಯಕ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ರೈತರ ಧ್ವನಿಯನ್ನು ಅಡಗಿಸಲು ಸಾಧ್ಯವಾಗುವುದಿಲ್ಲ ಎಂದು ಕಿಡಿಕಾರಿದರು. ಹಾವೇರಿ ಜಿಲ್ಲೆಯಲ್ಲಿ ರಾಜಕಾರಣಿಗಳ ದರ್ ಮಿತಿಮೀರುತ್ತಿದೆ, ಭವಿಷ್ಯದ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶಗೊಂಡ ಪಾಟೀಲ್, ಅಧಿಕಾರಿಗಳು ರಾಜಕಾರಣಿಗಳ ಕೃಪಾಪೋಷಿತ ದಿಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಿದರು. ಜಿಲ್ಲಾ ಅಧ್ಯಕ್ಷ ಈರಣ್ಣ ಹಲಗೇರಿ, ದಿಳ್ಳೆಪ್ಪಾ ಸತ್ಯಪ್ಪನವರ್, ಚಂದ್ರಣ್ಣ ಬೇಡರ, ಸುರೇಶ್ ಮಲ್ಲಾಪುರ, ಬಸವರಾಜ ಕೊಂಗಿ, ಜಿ..ಡಿ. ಪಾಟೀಲ, ಶಿವಪ್ಪ ಬಾರ್ಕಿ, ಸುರೇಶ್ ಮಾರೇರ, ಉಮಾದೇವಿ ಹಿರೇಮಠ, ರಾಮನಗೌಡ ಬಂಗಾರಿ, ಶಿವಾನಂದ ಅಂತರವಳ್ಳಿ ಸೇರಿದಂತೆ ಮತ್ತಿತರ ರೈತ ಮುಖಂಡರು ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಕಿಡಿಕಾರಿ ಮಾತನಾಡಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿಚಂದ್ರ್ಪ ಬಾರ್ಕಿ,ರಾಮನಗೌಡ ಪಾಟೀಲ, ಬಿ.ಜಿ. ಬಸವ ರೆಡ್ಡೇರ, ಎಫ್. ಐ.ಕೋರಿ, ಹರಿಹರ ಗೌಡ ಪಾಟೀಲ, ಹನಮಂತಪ್ಪ ಕುಂಬಳೂರು, ಅಶೋಕ್ ಗಂಗನ ಗೌಡ್ರು, ಬಿ.ಸಿ. ಯಲ್ಲಕ್ಕನವರ, ಹುಸೇನ್ ಸಾಬ್ ದೊಡ್ಡಮನಿ, ಗುಂಡನ ಗೌಡ ಪಾಟೀಲ, ನಿಂಗರೆಡ್ಡಿ ಅಂತರವಳ್ಳಿ, ಸೇರಿದಂತೆ ನೂರಾರು ರೈತ ಮುಖಂಡರು, ರೈತರು ರೈತ ಕಾರ್ಮಿಕರು ಪಾಲ್ಗೊಂಡಿದ್ದರು. ತಹಸಿಲ್ದಾರ್ ಶಂಕರ್ ಜಿ ಎಸ್, ದಾವಣಗೆರೆ ಎ ಎಸ್ಪಿ ಕನ್ನಿಕಾ ಶಿಕ್ರವಾಲ್, ಸಿಪಿಐ-ಎಂ. ಐ. ಗೌಡಪ್ಪಗೌಡ್ರ್, ಪಿಎಸ್ಐ ತೇಲಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಬಂದೋಬಸ್ತ್ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದರು.