ರಾಣೆಬೆನ್ನೂರ

ರೈತರಿಗೆ ಗೊಬ್ಬರ ಬೀಜ ಔಷಧಿ ಸಮರ್ಪಕ ವಿತರಣೆಗೆ ರೈತರ ಆಗ್ರಹ

ರೈತರಿಗೆ ಗೊಬ್ಬರ ಬೀಜ ಔಷಧಿ ಸಮರ್ಪಕ ವಿತರಣೆಗೆ ರೈತರ ಆಗ್ರಹ

ರಾಣೇಬೆನ್ನೂರು 08: ತಾಲೂಕಿನ ರೈತರಿಗೆ ಮುಂಗಾರು ಬಿತ್ತನೆ ಅವಧಿ ಆರಂಭವಾಗಿರುವ ಈ ಸಂದರ್ಭದಲ್ಲಿ ಕೃಷಿ ಸಚಿವರು ಯಾವುದೇ ರೀತಿಯಲ್ಲಿ ಗೊಬ್ಬರ ಬೀಜ ಓಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡ ಹನುಮಂತಪ್ಪ ಕಬ್ಬಾರ, ಕೃಷ್ಣಮೂರ್ತಿ ಲಮಾಣಿ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಮುಖಾಂತ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ರೈತರ ಅನೇಕ ಸಮಸ್ಯೆಗಳು ಪರಿಹಾರ ಕಾಣದೆ ಹಾಗೆಯೇ ಬಾಕಿ ಉಳಿದಿವೆ. ಕೂಡಲೇ ಅವುಗಳನ್ನು ಪರೀಶೀಲಿಸಿ ಪರಿಹಾರಕ್ಕೆ ಮುಂದಾಗಬೇಕು. ಜಿಲ್ಲೆಯವರಾದ ಮುಖ್ಯಮಂತ್ರಿಗಳು, ಕೃಷಿ ಸಚಿವರು ಕೂಡಲೇ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಮತ್ತು ರೈತರಿಗೆ ಅನಾನುಕೂಲವಾಗುವಂತೆ ಸಮರ​‍್ಕವಾಗಿ ಕಡಿಮೆ ದರದಲ್ಲಿ ಬೀಜ ಗೊಬ್ಬರ ಓಷಧಿಗಳನ್ನು ಪೂರೈಸಲು ಮುಂದಾಗಬೇಕು; ಹಾನಿಗೊಂಡ ರೈತರಿಗೆ ಪ್ಯಾಕೇಜ್ ಘೋಷಿಸಿ ಸಹಕರಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ. 

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಬಸವರಾಜ ಕಡೂರ, ಕಿರಣ್ ಗುಳೇದ, ಮಂಜುನಾಥ ದುಗ್ಗತ್ತಿ, ಮಹೇಶಪ್ಪ ಕರೇಗೌಡ್ರ, ಬ್ರಹ್ಮಾನಂದ ಉಜ್ಜೇರ, ಆನಂದ ಹುಲ್ಬನ್ನಿ, ರಾಜು ದೊಡ್ಡಮನಿ ಸೇರಿದಂತೆ ಮತ್ತಿತರೆ ರೈತರು, ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ