ರಸಗೊಬ್ಬರ ದರ ಕಡಿಮೆ ಮಾಡದಿದ್ದರೆ ಧರಣಿ: ರೈತ ಸೇನಾ ಎಚ್ಚರಿಕೆ
ಶಿಗ್ಗಾವಿ : ರೈತರ ಬಗ್ಗೆ ಕರುಣೆ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರ ರಸಗೊಬ್ಬರ ದರವನ್ನು ಶೀಘ್ರ ಕಡಿಮೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಮಾಡಲಾಗುವುದು ಎಂದು ರೈತ ಸೇನಾ ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನರು ತುಂಬಾ ಸಂಕಷ್ಟದಲ್ಲಿ ಇದ್ದಾರೆ ಸರಕಾರಗಳು ಅವರ ನೆರವಿಗೆ ಬರುತ್ತಿಲ್ಲ. ಬೆಂಬಲ ಬೆಲೆ ನೀಡಿಲ್ಲ, ಇತ್ತ ರಸಗೊಬ್ಬರ ಬೆಲೆ ಗಗನಕ್ಕೆ ಏರಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಲಾಗುತ್ತಿದೆ ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡರಿಗೆ ಮನವಿ ಸಲ್ಲಿಸಿದಾಗ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು, ಆದರೆ ಇದುವರೆಗೂ ಈಡೇರಿಲ್ಲ ರೈತಪರ ಯೋಜನೆಗಳನ್ನು ಹೆಸರಿಗಷ್ಟೇ ಘೋಷಿಸಿ ತಿಲಾಂಜಲಿ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಕೊರೋನಾದಿಂದಾಗಿ ರೈತರು ಸಾಕಷ್ಟು ಸಂಕಷ್ಟದಲ್ಲಿ ಇರುವಾಗ ಸರಕಾರ ರಸಗೊಬ್ಬರ ಬೆಲೆಯ ದರವನ್ನು ಏರಿಸಿ ರೈತ ಸಮುದಾಯವನ್ನು ಕೃಷಿಯಿಂದ ದೂರ ಸರಿಸುವ ಹುನ್ನಾರ ಮಾಡುತ್ತಿದೆ, ಕೂಡಲೇ ರಸಗೊಬ್ಬರ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ