ದೇವರಗುಡ್ಡದಲ್ಲಿ ರೈತ ಮಹಿಳೆ ಹಾವು ಕಚ್ಚಿ ಸಾವು, ಪರಿಹಾರಕ್ಕೆ ರೈತರ ಆಗ್ರಹ
ರಾಣೆಬೆನ್ನೂರು: ತಾಲೂಕಿನ ದೇವರಗುಡ್ಡ ಗ್ರಾಮದ ರೈತ ಮಹಿಳೆ ಸುನಿತಮ್ಮ ಅಜ್ಜಪ್ಪ ರೊಡಣ್ಣನವರ (42) ಕೆಲಸ ಮಾಡುವ ಸಮಯದಲ್ಲಿ ಹಾವು ಕಚ್ಚಿ ಚಿಕಿತ್ಸೆ ಪಲಿಸದೆ ಸಾವುನಪ್ಪಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತರ ಸಂಘದ ಮುಖಂಡರು ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಣೆಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಎದುರು ಪ್ರತಿಭಟಿಸಿದರು.ರೈತ ಮುಖಂಡರಾದ ಸುರೇಶಪ್ಪ ಹೊನ್ನಮ್ಮನವರ, ಲೋಕೇಶ ಸುತಾರ,ಪಕೀರಪ್ಪ ಜಾಡರ್ ಹಾಗೂ ಗ್ರಾಮ ಘಟಕದ ರೈತರು ಹಿರಿಯ ಮುಖಂಡರು ಪಾಲ್ಗೊಂಡಿದ್ದರು.