ಅಥಣಿ

ರೈತ ಆತ್ಮಹತ್ಯೆ: 5ಲಕ್ಷ ರೂ. ಸಹಾಯಧನದ ಆದೇಶ ಪತ್ರ ವಿತರಣೆ

ರೈತ ಆತ್ಮಹತ್ಯೆ: 5ಲಕ್ಷ ರೂ. ಸಹಾಯಧನದ ಆದೇಶ ಪತ್ರ ವಿತರಣೆ

ಲೋಕದರ್ಶನ ವರದಿ

ಸಂಬರಗಿ 02: ಪಾಂಡೆಗಾಂವ್ ಗ್ರಾಮದ ರಾಕೇಶ್ ಗೋಪಾಲ ಕಾಗಲೆ ರೈತ ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದು, ಮೃತ ಕುಟುಂಬದ ವಾರಸುದಾರರಿಗೆ ಸರ್ಕಾರದಿಂದ 5 ಲಕ್ಷ ರೂ. ಸಹಾಯಧನದ ಆದೇಶ ಪತ್ರವನ್ನು ಕಾಗವಾಡ ಶಾಸಕ ರಾಜು ಕಾಗೆ ನೀಡಿದರು.

  ಅವರು ಮಾತನಾಡಿ ಶಾಸಕ ರಾಜು ಕಾಗೆ ರೈತರು ಸಾಲಬಾಧೆಯಾದರೂ ಸಹ ಆತ್ಮಹತ್ಯೆಗೆ ಶರಣಾಗಬಾರದು. ಅದರಿಂದ ಕುಟುಂಬಸ್ಥರಿಗೆ ದೊಡ್ಡ ನಷ್ಟವಾಗುತ್ತದೆ. ಸಾಲವಾದರೂ ಗೊಂದಲದಲ್ಲಿ ಬೀಳದೇ ಧೈರ್ಯದಿಂದ ಇರಬೇಕು. ನಾವು ಸತತವಾಗಿ ರೈತರ ಬೆನ್ನೆಲುಬಾಗಿ ಕೆಲಸಮಾಡುತ್ತಿದ್ದೇನೆ ಎಂದರು.

 ತಹಶಿಲ್ದಾರ ರಾಜೇಶ್ ಬುರ್ಲಿ , ಸಹಾಯಕ ಕೃಷಿ ನಿರ್ದೇಶಕರಾದ ನಿಂಗಣ್ಣಾ ಬಿರಾದಾರ, ಅನಂತಪೂರ ವಲಯ ಕೃಷಿ ಅಧಿಕಾರಿ ಶಿವಪುತ್ರ ಗುಂಜಿಗಾಂವಿ ಸೇರಿದಂತೆ ಗಣ್ಯರು ಹಾಗೂ ರೈತರು ಉಪಸ್ಥಿತರಿದ್ದರು 

ಸುದ್ದಿ ಓದಿ