ರೈತ ಸಮುದಾಯ ಇ ಕೆವೈಸಿ ಮಾಡಿಸಿಕೊಳ್ಳಬೇಕು: ವರುಣಗೌಡ ಪಾಟೀಲ
ಲೋಕದರ್ಶನ ವರದಿ
ಶಿಗ್ಗಾವಿ 25: ರಾಜ್ಯದ ರೈತರು ಸರ್ಕಾರದಿಂದ ಬರುವ ವಿವಿಧ ಸೌಲಭ್ಯ ಪಡೆದುಕೊಳ್ಳಲು ತುರ್ತಾಗಿ ಇ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲಾ ರೈತ ಸೇನಾ ಜಿಲ್ಲಾಧ್ಯಕ್ಷರಾದ ವರುಗೌಡ ಪಾಟೀಲ ಹೇಳಿದರು.
ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾಗತೀಕರಣದ ಈ ಸಂದರ್ಭದಲ್ಲಿ ರೈತರು ಕೂಡಾ ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳುವದರ ಜೊತೆಗೆ ಸರಕಾರದ ನಿಯಮವನ್ನು ಪಾಲನೆ ಮಾಡುವದು ಅನಿವಾರ್ಯತೆ ಇದೆ. ಎಲ್ಲವು ಕಂಪ್ಯೂಟರೀಕರಣಗೊಂಡಿದೆ ರೈತರ ಎಲ್ಲ ಮಾಹಿತಿಗಳು ಡಿಜಿಟಲೀಕರಣಗೊಂಡಿವೆ.
ಇದರಿಂದ ರೈತರ ಪಹಣಿಯಿಂದ ಹಿಡಿದು ಎಲ್ಲ ಮಾಹಿತಿಗಳು ಕ್ಷಣ ಮಾತ್ರದಲ್ಲಿ ನಮಗೆ ಆನಲೈನ್ ಮೂಲಕ ಸಿಗುತ್ತಿದೆ. ಇಂದು ಕ್ರಷಿ ಇಲಾಖೆಯಿಂದ ಮಾಹಿತಿ ಇರುವ ಪ್ರಕಾರ ಜಿಲ್ಲೆಯ ಬಹುತೇಕ ರೈತರು ಇ ಕೆವೈಸಿ ಮಾಡಿಸಿಲ್ಲ ಹಾಗಾಗಿ ಕೇಂದ್ರ ರಾಜ್ಯ ಸರ್ಕಾರದಿಂದ ರೈತರಿಗೆ ನೀಡುವ ವಿವಿಧ ಸೌಲಭ್ಯಗಳನ್ನು ಪಡೆಯಲು ಇ ಕೆವೈಸಿ ಮಾಡಿಸುವ ಅನಿವಾರ್ಯತೆ ಇದೆ ಹಾಗಾಗಿ ಎಲ್ಲ ರೈತರು ಆ. 31 ಒಳಗಾಗಿ ಇ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ರೈತರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ