ರಾಣೆಬೆನ್ನೂರ

ಸಾಲದ ಸುಳಿಗೆ ಸಿಲುಕಿದ ರೈತ ಮಾದೇವಪ್ಪ ನೇಣಿಗೆ ಶರಣು

ಸಾಲದ ಸುಳಿಗೆ ಸಿಲುಕಿದ ರೈತ ಮಾದೇವಪ್ಪ ನೇಣಿಗೆ ಶರಣು

ರಾಣೆಬೆನ್ನೂರು 06:  ಅತಿವೃಷ್ಟಿಯಿಂದ ಬೆಳೆ ಹಾನಿ, ದೊರೆಯದ ಬೆಳೆ ನಷ್ಟ ಪರಿಹಾರ, ವಿಮಾ ಹಣ ದೊರೆಯದ ಕಾರಣ, ಸಾಲದ ಸುಳಿಗೆ ಸಿಲುಕಿದ್ದ ರೈತ ಮಹದೇವಪ್ಪ ಹಾಲಪ್ಪ. ಬಿಲ್ಲಹಳ್ಳಿ (46) ಎಂಬಾತನು ತನ್ನ ಸ್ವಗ್ರಾಮ ಗುಡ್ಡದ ಹೊಸಳ್ಳಿ ನೇಣಿಗೆ ಶರಣಾಗಿರುವ ದುರಂತ ಘಟನೆ ಸಂಭವಿಸಿದೆ. ಗ್ರಾಮದ ಹೊರವಲಯದ ಜಮೀನು ಒಂದರಲ್ಲಿ ಮಾದೇವಪ್ಪ ಸರಕಾರದ ರೈತ ವಿರೋಧಿ ನೀತಿಯಿಂದ, ಆರ್ಥಿಕ ಸಂಕಷ್ಟವನ್ನು ಎದುರಿಸಲಾರದೆ  ನೇಣಿಗೆ ಶರಣಾಗಿದ್ದು, ಆತನ ಸಾವಿಗೆ ನೇರವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳು ಹೊಣೆಯಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ.  

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಗುಡ್ಡದ ಹೊಸಳ್ಳಿ ರೈತ ಭಾನುವಾರ ಮಧ್ಯಾಹ್ನ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ವರ್ಷಗಳಿಂದ ಬೆಳೆ ವಿಮೆ ಯೋಜನೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ತುಟಿಪಿಟಕ್ಕೆನ್ನದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಯಾವುದೇ ಪರಿಹಾರ ಕಾಣದ ರೈತ ಸಾಲದ ಸುಳಿಗೆ ಸಿಲುಕಿ, ಬದುಕಿನ ದಾರಿ ಕಾಣದೆ  ನೇಣಿಗೆ ಶರಣಾಗಿದ್ದಾನೆ ಇದಕ್ಕೆ ಜಿಲ್ಲಾಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಆರೋಪಿಸಿದರು.. ಅತಿವೃಷ್ಟಿ ಪರಿಹಾರ ಸಿಗದೇ, ಬೆಳೆ ವಿಮೆ ಎಲ್ಲಾದ ಗೋಲ್ಮಾಲ್, ಬೆಳೆ ನಷ್ಟ ಪರಿಹಾರ ಸಿಗದೇ ರೈತರು ಕಂಗಾಲಾಗಿದ್ದಾರೆ. ಬದುಕು ಕಟ್ಟಿಕೊಳ್ಳಲಾಗದೆ ಪರಿಸ್ಥಿತಿಯಲ್ಲಿರುವ ರೈತನಿಗೆ ಎಂದು ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ರೈತರಿಗಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯನ್ನು, ಬಂದ್ ಗೆ ಕರೆ ನೀಡುವುದು ಅನಿವಾರ್ಯವಾಗಿದೆ ಎಂದು ಪಾಟೀಲ್, ಆಡಳಿತಕ್ಕೆ ಎಚ್ಚರಿಸಿದರು. ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಶೋಕ್ ಅರಳೇಶ್ವರ, ಮಂಜುನಾಥ್ ಜಲ್ಲೆರ್, ಕೃಷಿ ಇಲಾಖೆಯ ಶಿವಾನಂದ ಹಾವೇರಿ ಆದರೂ ಪ್ರತಿಭಟನಾ ನಿರತರಿಗೆ, ಸಮಾಧಾನಿಸಿ, ಶೀಘ್ರ ಪರಿಹಾರಕ್ಕೆ ಆಡಳಿತದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆರ್ ಡಿ ಪಾಟೀಲ್, ಗೀರೀಶ್ ಹುಡೇದ್, ಶಿವಾನಂದ ಲಿಂಗದಹಳ್ಳಿ, ಚಂದ್ರು ನಾಯಕ್, ನಿಂಗಣ್ಣ ಕೊಟ್ಟದ, ರಾಮನಗೌಡ ಬಂಗಾರಿ, ಬಸವರಾಜಪ್ಪ ಹಿಂಡೇರ, ಶಿವನಗೌಡ ಹಿಂಡೇರ, ಸೇವೆ ಮತ್ತಿತರ ಮುಖಂಡರು, ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು 


ಸುದ್ದಿ ಓದಿ