ಅಥಣಿ

ಸಂಘದ ರೈತ ಅಭಿವೃದ್ಧಿ ಸಹಕಾರ ಪೆನಲ್ ಆಡಳಿತ ಚುಕ್ಕಾಣಿ

ಸಂಘದ ರೈತ ಅಭಿವೃದ್ಧಿ ಸಹಕಾರ ಪೆನಲ್ ಆಡಳಿತ ಚುಕ್ಕಾಣಿ

ಶಿವನೂರ ವಿವಿಧೋದ್ದೇಶಗಳ ಕೃಷಿ ಸಂಘದ  

ಅಥಣಿ 28: ಶಿವನೂರ ಗ್ರಾಮ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಮಾರ್ಗದರ್ಶನದಲ್ಲಿ ಮಾಜಿ ಜಿ.ಪಂ ಸದಸ್ಯ ರಾವಸಾಹೇಬ ಬೆವನೂರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ  ರೈತ ಅಭಿವೃದ್ಧಿ ಸಹಕಾರ ಪೆನಲ್ ನ ಎಲ್ಲ 12 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ  ಸಂಘದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.   

 ಚುನಾವಣಾ ಫಲಿತಾಂಶದ ನಂತರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರಾವಸಾಹೇಬ ಬೆವನೂರ, ಶಿವನೂರ ಗ್ರಾಮದ ಸಹಕಾರಿ ಸಂಘಕ್ಕೆ ಕಳೆದ 20 ವರ್ಷಗಳ ಅವಧಿಯಲ್ಲಿ ಕೆಲವರ ಕುತಂತ್ರದ ಪರಿಣಾಮ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದರೂ ಕೂಡ ನಮ್ಮ ಮೇಲೆ ವಿಶ್ವಾಸ ಇಟ್ಟ ರೈತರು ನಮ್ಮ ಎಲ್ಲ ಅಭ್ಯರ್ಥಿಗಳನ್ನು ಬೆಂಬಲಿಸಿದ್ದು, ನಮ್ಮ ಬೆಂಬಲಕ್ಕೆ ನಿಂತ ರೈತ ಬಾಂಧವರನ್ನು ಅಭಿನಂದಿಸಿದರು.  

ಸಹಕಾರಿ ಸಂಘದ ಮೂಲಕ ರೈತರಿಗೆ ವೈದ್ಯಕೀಯ ಸೇವೆಯೊಂದಿಗೆ ಉಚಿತವಾಗಿ ಜನರಿಕ್ ಓಷಧಗಳನ್ನೂ ಸಹ ಮುಂದಿನ ದಿನಗಳಲ್ಲಿ ಕೊಡುತ್ತೇವೆ ಮತ್ತು ರೈತರ ಅನಕೂಲಕ್ಕಾಗಿ ಗೊಬ್ಬರ, ಬೀಜಗಳನ್ನೂ ಸಹ ವಿತರಿಸುತ್ತಿದ್ದೇವೆ ಎಂದ ಅವರು  ಈಗಾಗಲೇ ರೈತರಿಗೆ ಬೆಳೆ ಸಾಲ, ಬಿಡಿಪಿ, ಹೈನುಗಾರಿಕೆ, ಸ್ವಸಾಯ ಸಂಘಕ್ಕೆ ಸಾಲ ವಿತರಿಸಲಾಗಿದ್ದು, ಈ ಬಾರಿ ರೈತರಿಗೆ ಸಹಕಾರಿ ಸಂಘದ ಮೂಲಕ ಲಾಭಾಂಶವನ್ನು ಕೂಡ ಹಂಚಿಕೆ ಮಾಡುವ ಗುರಿ ಇಟ್ಟುಕೊಂಡಿರುವ ನಮಗೆ ಈ ಚುನಾವಣೆಯಲ್ಲಿ ಅನವಶ್ಯಕವಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದರಿಂದ ಕಷ್ಟ ಸಾಧ್ಯ ಎಂದು ಹೇಳಿದರು.  

ಕಾಂಗ್ರೆಸ್ ಪಕ್ಷದ ಯುವ ಧುರೀಣ ರಾಮನಗೌಡ ಪಾಟೀಲ ಮಾತನಾಡಿ, ಸಹಕಾರ ಸಂಘದ ಸಂಸ್ಥೆಗಳಲ್ಲಿ ಚುನಾವಣೆ ನಡೆಯಬಾರದು ಆದರೆ ಶಿವನೂರ ಗ್ರಾಮದ ಈ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅನವಶ್ಯಕವಾಗಿ ಕೆಲವರ ವ್ಯಯಕ್ತಿಕ ಹಿತಾಸಕ್ತಿಯ ಪರಿಣಾಮ ಚುನಾವಣೆ ನಡೆಯುತು ಆದರೂ ರೈತರು ವಿರೋಧಿಗಳ ಅಭ್ಯರ್ಥಿಗೆ ಮತ ನೀಡದೇ ನಮ್ಮ ಪೆನಲ್ ನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದ ಅವರು ಚುನಾವಣೆ ಮಾಡುವ ಈ ವ್ಯಕ್ತಿಗಳು ದಮ್ನು, ತಾಕತ್ತಿದ್ದರೆ ಸಾರ್ವಜನಿಕ ಚುನಾವಣೆಗಳಲ್ಲಿ ಭಾಗವಹಿಸಲಿ ಎಂದು ಸವಾಲೆಸೆದರು.  

ಚುನಾವಣೆಯಲ್ಲಿ ರಾವಸಾಹೇಬ ಬೆವನೂರ, ಅಪ್ಪಾಸಾಬ ಕಿರಣಗಿ, ಸಂಭಾಜಿ ವಾಘಮೋಡೆ, ರಾವಸಾಬ ಗುಗ್ಗರಿ, ಹೂವಣ್ಣಾ ಮಾನೆ, ಶ್ರೀಮತಿ ಸರಸ್ವತಿ ಜೋತೆಪ್ಪ ಆಜೂರ, ಶ್ರೀಮತಿ ರೇಖಾ ಸದಾನಂದ ಬಿರಾದಾರ, ಅಶೋಕ ಕಿರಣಗಿ, ರೋಹಿತ ಮಗದುಮ್, ಪಂಡಿತ ಕಾಂಬಳೆ, ಸುಖದೇವ ಸನದಿ, ಅವ್ವಣ್ಣಾ ವಾಘರೆ ಜಯ ಸಾಧಿಸಿದರು.   

ವಿಜಯೋತ್ಸವದಲ್ಲಿ ಓಂ ಪ್ರಕಾಶ ಪಾಟೀಲ, ಮುರುಘೇಶ ಪಾಟೀಲ,  ಮಹೇಶ ಹಬಗುಂಡಿ, ಸದಾನಂದ ಬಿರಾದಾರ, ಶಿವಾನಂದ ಬೆವನೂರ, ರಾಜು ಆಜೂರ, ಬಸಪ್ಪ ಕಾಂಬಳೆ, ಪಾಂಡು ವಾಘಮೋಡೆ, ಭಾವುಸಾಹೇಬ ವಾಘಮೋಡೆ, ಕರ್ಣ ಬೆವನೂರ, ಬಿ.ಬಿ. ಆಜೂರ, ರಾವಸಾಹೇಬ ಬುರಾದಾರ, ರಾಜು ಆಜೂರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದರು. 


ಸುದ್ದಿ ಓದಿ