ತಾಳಿಕೋಟಿ

ಸಾಲಭಾಧೆ ರೈತ ಆತ್ಮಹತ್ಯೆ

ಸಾಲಭಾಧೆ ರೈತ ಆತ್ಮಹತ್ಯೆ

ತಾಳಿಕೋಟೆ23:ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಕೊಡಗಾನೂರ ಗ್ರಾಮದ ಭೀಮಣ್ಣ ರತ್ನಪ್ಪ ಆಲ್ಯಾಳ(30) ಆತ್ಮಹತ್ಯೆ ಮಾಡಿಕೊಂಡರುವ ರೈತನಾಗಿದ್ದಾನೆ. 7 ಎಕರೆ ಜಮೀನು ಹೊಂದಿದ್ದ ಭೀಮರ್ಣಣ 1 ಲಕ್ಷ ರೂ ಬೆಳೆ ಸಾಲ ಮತ್ತು 50 ಸಾವಿರ ರೂಗಳ ಕೈಗಡ ಸಾಲ ಮಾಡಿದ್ದನು. ಕಳೆದ ಸಾಲಿನಲ್ಲಿ ಸರಿಯಾಗಿ ಬೆಳೆ ಬಾರದ ಹಿನ್ನಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗಿಲ್ಲ. ಈ ವರ್ಷ ಬಿತ್ತನೆ ಕಾರ್ಯ ಮಾಡಲು ಹಣವಿಲ್ಲ ಎನ್ನುವ ಚಿಂತೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ