ರೈತನ ಮಗಳು ರಾಜ್ಯಕ್ಕೆ ಮೂರನೇ ರಾ್ಯಂಕ್
ಬ್ಯಾಡಗಿ 24: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಿವೇದಿತಾ ಪರಶುರಾಮ್ ಅಜ್ಜಮ್ಮನವರ್ ಇವಳು 625 ಅಂಕಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾಳೆ. ಶಾಸಕರಿಂದ ಸನ್ಮಾನ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ನಿವೇದಿತಾ ವಿದ್ಯಾರ್ಥಿಗೆ ಕ್ಷೇತ್ರದ ಶಾಸಕರಾದ ಬಸವರಾಜ್ ಶಿವಣ್ಣನವರು ಅವರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗೆ ಸನ್ಮಾನವನ್ನು ಮಾಡಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ದಾನಪ್ಪ ಚೂರಿ. ಸುರೇಶ್ ಹುಳಬುತ್ತಿ. ಮಲ್ಲಿಕಾರ್ಜುನ್ ಕರಿ ಲಿಂಗಣ್ಣನವರ್. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ. ಹಾಗೂ ಅನೇಕರು ಉಪಸ್ಥಿತರಿದ್ದರು.