ಕಾರವಾರ

ಕಾರವಾರ ಲಾಯನ್ಸ್ ಕ್ಲಬ್‍ವತಿಯಿಂದ ಶಸ್ತ್ರ ಚಿಕಿತ್ಸೆ ರೋಗಿಗಳ ಬೀಳ್ಕೊಡುಗೆ

ಕಾರವಾರ  ಲಾಯನ್ಸ್ ಕ್ಲಬ್‍ವತಿಯಿಂದ  ಶಸ್ತ್ರ ಚಿಕಿತ್ಸೆ ರೋಗಿಗಳ ಬೀಳ್ಕೊಡುಗೆ

ಕಾರವಾರ 02 : ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್, ಉ.ಕ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಕಾರವಾರ ವೈದ್ಯಕೀಯ ಭೋದಕ ಆಸ್ಪತ್ರೆ ಇವರ ಸಹಯೋಗದೊಂದಿಗೆ ಲಾಯನ್ಸ ಕ್ಲಬ್ ನಿಂದ ಉಚಿತ ನೇತ್ರ ಮೋತಿ ಬಿಂದು ತಪಾಸಣಾ ಮತ್ತು  ಲೇಜರ್ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ಏರ್ಪಡಿಸಲಾಗಿತ್ತು. ಲಾಯನ್ಸ್ ಕ್ಲಬ್ ವತಿಯಿಂದ ಈತನಕ 40ಕ್ಕು ಹೆಚ್ಚು ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಬೀಳ್ಕೊಡಲಾಯಿತು. ಲಾಯನ್ಸ್ ಕ್ಲಬ್‍ನ ಗುರಿಯ ಪ್ರಕಾರ  ಇನ್ನು 60 ಜನರನ್ನು ಮುಂದಿನ 2-3 ತಿಂಗಳೊಳಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವದು ಎಂದು ವೈದ್ಯರು ಭರವಸೆ ನಿಡಿದರು. ಮೊದಲಿಗೆ ಲಾಯನ್ಸ್ ಕ್ಲಬ್ ಅಧ್ಯಕ್ಷ ಎಮ್.ಜೇ.ಎಫ್.ಲಾ.ಇಬ್ರಾಹಿಂ ಕಲ್ಲುರು ಎಲ್ಲಾ ವೈದ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ ಕುಮಾರ, ಡಾ. ರಮೇಶ್ ವೆಂಕಿಮನೆ, ಡಾ. ಸಚಿನ್ ಟಿ, ಡಾ. ನೀರಜ ,ಡಾ. ಗಜರಾಜ  ಮತ್ತು ಆಸ್ಪತ್ರೆಯ ಸಿಬ್ಬಂದಿವರ್ಗ   ಪಾಲ್ಗೊಂಡಿದ್ದರು. ಕಾರ್ಯಕ್ರಮದಲಿ ್ಲ  ಚೇರ್ ಪರ್ಸನ್  ಲಾ.ಅಲ್ತಾಫ ಶೇಖ ,ಕಾರ್ಯದರ್ಶಿ ಐಶ್ವರ್ಯಾ ಮಾಸೂರ್‍ಕರ್ ,ಲಾ. ಅನಿರುಧ್ದ ಹಲ್ದಿಪುರ್‍ಕರ್, ಲಾ. ಎಲ್.ಎಮ್.ಪ್ರಭು, ಲಾ.ಮಂಜುನಾಥ ಪವಾರ, ನ್ಯಾಯವಾದಿ ಲಾ.ಕೇ.ಎಸ್.ಕಿನ್ನರ್‍ಕರ್, ಲಾ. ಹನೀಫ ಮುಲ್ಲಾ ಉಪಸ್ಥಿತರಿದ್ದರು.

ಸುದ್ದಿ ಓದಿ