ಯರಗಟ್ಟಿ

ತಹಶೀಲ್ದಾರ ಚಂದ್ರಶೇಖರ ನಾಯ್ಕಗೆ ಬೀಳ್ಕೊಡುಗೆ

ತಹಶೀಲ್ದಾರ ಚಂದ್ರಶೇಖರ ನಾಯ್ಕಗೆ ಬೀಳ್ಕೊಡುಗೆ

ಲೋಕದರ್ಶನ ವರದಿ

ಯರಗಟ್ಟಿ 03: ಅಧಿಕಾರ ನಿರ್ವಹಿಸಿದ ಅಲ್ಪ ಕಾಲದಲ್ಲಿಯೇ ಯರಗಟ್ಟಿ ಬಗ್ಗೆ ಅರಿತುಕೊಂಡು ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದ ತಹಸೀಲ್ದಾರ್ ಎಮ್. ಎನ್. ಮಠದ ಮತ್ತೆ ಹಿಂತಿರುಗಿರುವುದು ಒಂದೆಡೆ ಸಂತಸವಾದರೆ ಮತ್ತೊಂಡೆದೆ ಬೇಸರ ಮೂಡುತ್ತದೆ. ಆದರೂ ಸರಕಾರಿ ಸೇವೆಯಲ್ಲಿ ಇದೆಲ್ಲಾ ಸರ್ವೇ  ಸಾಮಾನ್ಯ ಎಂದು ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಹೇಳಿದರು.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅಣ್ಣಿಗೇರಿಗೆ ವಗರ್ಾಯಿಸಲಾದ ತಹಸೀಲ್ದಾರ್ ಎಮ್. ಎನ್. ಮಠದ ಅವರು ಮತ್ತೆ ಕೇಂದ್ರಸ್ಥಾನಕ್ಕೆ ಸ್ಥಾನಕ್ಕೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಯರಗಟ್ಟಿ ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಅವರು ಸಾಗರ ತಹಶೀಲ್ದಾರರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಕಂದಾಯ ನಿರೀಕ್ಷಕ ವಾಯ್. ಎಫ್ ಮುತ್ತೆನ್ನವರ, ಶಿರಸದಾರ ಎಸ್. ಬಿ. ಕುಲಕರ್ಣಿ, ಸಂತೋಷ ಜಾದವ, ಭೂ ಇಲಾಖೆ ಅಧಿಕಾರಿ ಪ್ರಕಾಶ ಸತ್ತಿಗೇರಿ, ಗ್ರಾಮ ಲೆಕ್ಕಾಧಿಕಾರಿಗಳಾದ ಎಲ್. ಬಿ. ದಳವಾಯಿ, ಶಾಹಿನ್ ಮಿಸರಿಕೋಟಿ, ಎಲ್. ಸಿ. ತಳವಾರ, ಸಂತೋಷ ಕಾಂಬಳೆ, ಕೆಂಪಣ್ಣಾ ಗಡ್ಕರಿ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 

ಸುದ್ದಿ ಓದಿ