ಸಿಂಧಗಿ

ಮಹಾಂತೇಶ ಹಿಪ್ಪರಗಿ, ಕಿಶನರಾವ್ ಕುಲಕರ್ಣಿಗೆ ಬೀಳ್ಕೊಡುಗೆ

ಮಹಾಂತೇಶ ಹಿಪ್ಪರಗಿ, ಕಿಶನರಾವ್ ಕುಲಕರ್ಣಿಗೆ ಬೀಳ್ಕೊಡುಗೆ

ಸಿಂದಗಿ 18: ವೃತ್ತಿ ಜೀವನದ ಅನುಭವ ಅಪಾರವಾದುದು. ಇದು ಕಲಿಕಾ ಕೇಂದ್ರದ ಜೊತೆಗೆ, ತಾನು ಇಲ್ಲಿಂದ ಕಲಿತ ವಿಚಾರಗಳು ಹತ್ತು ಹಲವಾರು. ಶಿಕ್ಷಕರು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುವ ರೀತಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ರಾಸಾಯನಶಾಸ್ತ್ರ ಉಪನ್ಯಾಸಕ ಮಹಾಂತೇಶ ಹಿಪ್ಪರಗಿ ಹಾಗೂ ಗಣಿತಶಾಸ್ತ್ರ ಉಪನ್ಯಾಸಕ ಕಿಶನರಾವ್ ಕುಲಕರ್ಣಿ ಹೇಳಿದರು. 

ಅವರು ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.  

ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಎನ್ ಆರ್ ಗಂಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ಎಸ್ ಮೋರಟಗಿ, ಬಿ.ಎನ್ ಬಿರಾದಾರ, ಎಮ್‌.ಎಮ್ ಯಾಳಗಿ, ಎಸ್‌.ಎಸ್‌.ಸುರಪೂರ ಸೇರಿದಂತೆ ಎಲ್ಲ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಇದ್ದರು. 

ಅನಿಲಕುಮಾರ ರಜಪೂತ ಸ್ವಾಗತಿಸಿದರು.. ರಾಘವೆಂದ್ರ ಭಜಂತ್ರಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ