ಗೋಕಾಕ್

ಪ್ರಭಾರಿ ಮುಖ್ಯೋಪಾಧ್ಯಾಯ ಶಫೀಕ ಬಾಗಸಿರಾಜಗೆ ಬೀಳ್ಕೊಡುಗೆ

ಪ್ರಭಾರಿ ಮುಖ್ಯೋಪಾಧ್ಯಾಯ ಶಫೀಕ ಬಾಗಸಿರಾಜಗೆ ಬೀಳ್ಕೊಡುಗೆ

ಘಟಪ್ರಭಾ 01: ಸ್ಥಳೀಯ ಸರ್ಕಾರಿ ಉರ್ದು ಶಾಲೆಯಿಂದ ವರ್ಗಾವಣೆಗೊಂಡ ಪ್ರಭಾರಿ ಮುಖ್ಯೋಪಾಧ್ಯಾಯ ಶಫೀಕ ಬಾಗಸಿರಾಜ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲೆಯಲ್ಲಿ ಶನಿವಾರ ಜರುಗಿತು.  

ಶಾಲೆಯ ಸಹ ಶಿಕ್ಷಕರು, ಘಟಪ್ರಭಾ ಮುಸ್ಲಿಂ ಜಮಾತದಿಂದ ಹಾಗೂ ಘಟಪ್ರಭಾ ಸುತ್ತ ಮುತ್ತಲಿನ ಉರ್ದು ಹಾಗೂ ಕನ್ನಡ ಶಾಲೆಗಳ ಸಹ ಶಿಕ್ಷಕರು ಬಾಗಸೀರಾಜ ಅವರನ್ನು ಸತ್ಕರಿಸಿ ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಹಾರೈಸಿದರು.  

ಜಾಮಿಯಾ ಮಸೀದಿ ಅಧ್ಯಕ್ಷ ಶೌಕತ ಕಬ್ಬೂರ, ಹಿರಿಯರಾದ ಸರಫರಾಜ ಬಾಗವಾನ, ಹಜರತ ಕಬ್ಬೂರ, ಮದಾರಸಾಬ ನಾಲಬಂದ, ದಾದಾಪೀರ ಶಾಬಾಜಖಾನ, ಹಿರಿಯರಾದ ಮೋದಿನಸಾಬ ಕಬ್ಬೂರ, ದಿಲಾವರ ಬಾಳೇಕುಂದ್ರಿ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದೀಲೀಪ್ ಕಲಾರಕೊಪ್ಪ, ಮುಖ್ಯೋಪಾಧ್ಯಾಯ ಡಿ.ಕೆ.ಜಮಾದಾರ, ಎಮ್‌.ಎಮ್‌.ಭೂಜಗರ, ಜಿ.ಎ.ಬಾಗೆ, ಎಸ್‌.ಎ.ಮುಲ್ಲಾ, ಉರ್ದು ಸಿ.ಆರ್‌.ಪಿ ಆರೀಪಹುಸೇನ್ ಟೋಪಿಚಾಂದ, ಎನ್‌.ಬಿ.ಭಜಂತ್ರಿ, ಆರ್‌.ಝಡ್‌.ಮಕಾನದಾರ, ಶಾಲೆಯ ಎಸ್‌.ಡಿ.ಎಮ್‌.ಸಿ ಸದಸ್ಯರು ಸಹ ಶಿಕ್ಷಕರು ವಿಧ್ಯಾರ್ಥಿಗಳು ಇದ್ದರು.  

ಸಹ ಶಿಕ್ಷಕಿ ಎಮ್‌.ಎ.ಸಿದ್ದೀಕಿ ನಿರೂಪಿಸಿದರು. ಶಿಕ್ಷಕ ಶಾನವಾಜ ದಬಾಡಿ ವಂದಿಸಿದರು. 


ಸುದ್ದಿ ಓದಿ