ಇಂಡಿ

ಶ್ರೀ ಶಿವಯೋಗಿಶ್ವರ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರೇರಣಾದಯಿ ಕಾರ್ಯ ಶ್ಲಾಘನೀಯ

ಶ್ರೀ ಶಿವಯೋಗಿಶ್ವರ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರೇರಣಾದಯಿ ಕಾರ್ಯ ಶ್ಲಾಘನೀಯ
ತಾಲೂಕಿನ ಸಾಲೋಟಗಿಯ ಶ್ರೀ ಶಿವಯೋಗೀಶ್ವರ ಪ.ಪೂ ಕಾಲೇಜಿನಲ್ಲಿ ನಡೆದ ಬಿಳ್ಕೋಡುವ ಸಮಾರಂಭದಲ್ಲಿ ಎ.ಎಸ್.ಮಂಗಳೂರ ಇವರನ್ನು ಸ

ಇಂಡಿ 15: ಬಡ ಮಕ್ಕಳ ಶೈಕ್ಷಣಿಕ ಏಳಿಗೆಗೆ ಸಾಲೋಟಗಿಯ ಶ್ರೀ ಶಿವಯೋಗಿಶ್ವರ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರೇರಣಾದಯಿ ಕಾರ್ಯ ಶ್ಲಾಘನೀಯ ಎಂದು ಪ್ರಾಚಾರ್ಯ ಸೇವೆಯಿಂದ ನಿವೃತ್ತರಾಗುತ್ತಿರುವ ಎ.ಎಸ್.ಮಂಗಳೂರ ಹೇಳಿದರು.

ಅವರು ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ಪ.ಪೂ ಕಾಲೇಜಿನಲ್ಲಿ ನಡೆದ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.

ನನ್ನ ಸೇವೆ ತೃಪ್ತಿ ತಂದಿದೆ. ಪ್ರಾಚಾರ್ಯರಾಗಿ ಸೇವೆ ಸಲ್ಲಿಸುವಾಗ ಮತ್ತು ಉಪನ್ಯಾಸಕರಾಗಿ ಸೇವೆ ಸಲ್ಲಿಸುವಾಗ ಸಂಸ್ಥೆಯವರು, ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಕಾರವನ್ನು ಸ್ಮರಿಸಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ದೊರೆತ ಅವಕಾಶವನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ ಎಂದರು.

ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಬಗಲಿ, ನಿವೃತ್ ಪ್ರಾಚಾರ್ಯ ಎ.ಎಸ್.ಗಾಣಿಗೇರ ಮಂಗಳೂರರವರ ಸೇವೆಯನ್ನು ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಕಾರ್ಯವನ್ನು ಕೊಂಡಾಡಿದರು.

ಸಂಸ್ಥೆಯ ಉಪಾದ್ಯಕ್ಷ ಎಸ್.ಜಿ.ಜೊತಗೊಂಡ, ಕಾರ್ಯದರ್ಶಿ ಎಸ್.ಸಿ.ಶಿವೂರ, ಉಪನ್ಯಾಸಕರಾದ ಎಮ್.ಆರ್.ಪೂಜಾರ, ಪಿ.ಡಿ.ಹ್ಯಾಳದ, ಬಿ.ಎಚ್.ಬಗಲಿ, ಆಡಳಿತ ಮಂಡಳಿಯ ಸದಸ್ಯರು, ಕಾಲೇಜು ಹಾಗೂ ಮಾಧ್ಯಮಿಕ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಓದಿ