ಜಮಖಂಡಿ

ಹಣ ವಸೂಲಿ ದಂಧೆ, ಕಿರುಕುಳ ನೀಡುತ್ತಿರುವ ನಕಲಿ ಪತ್ರಕರ್ತ ಸದಾಶಿವ ಅಕ್ಕಿವಾಡ ಗಡಿಪಾರಿಗೆ ಮನವಿ

ಹಣ ವಸೂಲಿ ದಂಧೆ, ಕಿರುಕುಳ ನೀಡುತ್ತಿರುವ ನಕಲಿ ಪತ್ರಕರ್ತ ಸದಾಶಿವ ಅಕ್ಕಿವಾಡ ಗಡಿಪಾರಿಗೆ ಮನವಿ

ಜಮಖಂಡಿ 29: ಬಾಗಲಕೋಟೆ, ವಿಜಯಪೂರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಪತ್ರಕರ್ತನೆಂದು ಹೇಳಿಕೊಂಡು ಬೆದರಿಕೆ ಹಾಕುವ ನಕಲಿ ಪತ್ರಕರ್ತ ಸದಾಶಿವ ಅಕ್ಕಿವಾಡ ಪತ್ರಕರ್ತರ ಸೋಗು ಹಾಕಿಕೊಂಡು ಹಣ ವಸೂಲಿ ಮಾಡುವ ದಂಧೆ ಮಾಡಿಕೊಂಡು ಕಿರುಕುಳ ನೀಡುತ್ತಿದ್ದು ಆತನನ್ನು ಗಡಿಪಾರು ಮಾಡಬೇಕೆಂದು ಸಾವಳಗಿ ಗ್ರಾಮದ ಗ್ರಾಮಸ್ಥರು ಜಮಖಂಡಿ ಉಪವಿಭಾಗಾಧಿಕಾರಿ, ತಹಶೀಲ್ದಾರ ಹಾಗೂ ಸಿಪಿಐ ಮಲ್ಲಪ್ಪ ಮಡ್ಡಿ ಅವರಿಗೆ ಮನವಿ ಸಲಿಸಿದರು.  

ನಗರದ ಡಿಎಸ್‌ಪಿ ಕಚೇರಿಯ ಆವರದಲ್ಲಿ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮಸ್ಥರು ಸಿಪಿಐ ಅವರಿಗೆ ಮನವಿ ಸಲಿಸಿ ಮಾತನಾಡಿದ ಅವರು, ನಕಲಿ ಪತ್ರಕರ್ತ ಸದಾಶಿವ ಅಕ್ಕಿವಾಡ ಇತನು ಲೋಕೋಪಯೋಗಿ, ಸಹಕಾರ, ಪಂಚಾಯತ ಪಿಡಿಓ, ಹಾಸ್ಟೆಲ್ ವಾರ್ಡನಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಮೆಡಿಕಲ್‌ಗಳು, ವೈನಶಾಪಗಳು, ಗೊಬ್ಬರ ಅಂಗಡಿಗಳು, ಶಾಲಾ ಕಾಲೇಜು, ದಾಬಾಗಳು, ಗುತ್ತಿಗೆದಾರರು ಸೇರಿದಂತೆ ಇನ್ನಿತರ ಹಲವಾರು ಜನರಿಗೆ ಎಲ್ಲರಿಗೂ ಕಿರುಕುಳ ನೀಡಿ. ಒಂದು ವೇಳೆ ಇಲಾಖೆ ಅಧಿಕಾರಿಗಳು ಹಣ ನೀಡದಿದ್ದರೆ ಅವರಿಗೆ ಧಮಕಿ ಹಾಕಿ ಅವರ ಯಾವುದಾದರು ಒಂದು ವಿಷಯವನ್ನು ಮೇಲಾಧಿಕಾರಿಗಳ ವಾಟ್ಸಾಪಗೆ ಹಾಕಿ ಅವರ ಹೆಸರು ಹೇಳಿ ಬ್ಲಾಕ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾನೆಂದು ಆರೋಪಿಸಿದರು. 

ನ್ಯಾಯದ ಬಾಗಿಲು ಎಂಬ ಪ್ರಾಕ್ಷಿಕ ಪತ್ರಿಕೆಯೊಂದನ್ನು ಇಟ್ಟುಕೊಂಡು ಅದರ ಮುಖ ಪುಟದಲ್ಲಿ ಹಣ ನೀಡದ ಅಧಿಕಾರಿಗಳ ಪೋಟೊ ಹಾಕಿ ಸುಳ್ಳು ಸುದ್ದಿಗಳನ್ನು ಬರೆದು ಅವರ ವಾಟ್ಸಾಪಗೆ ಕಳಿಸುತ್ತಾನೆ, ಅವರು ಸ್ಪಂದಿಸದಿದ್ದರೆ, ಅವನ ಹೆಸರಿನ ಪೇಸ್ ಬುಕ ಪೇಜ್‌ನಲ್ಲಿ ಹಾಗೂ ನ್ಯಾಯದ ಬಾಗಿಲು ಎಂಬ ವಾಟ್ಸಾಪ ಗ್ರೂಪಗೆ ಹಾಕಿ ಕಿರುಕುಳ ನೀಡುತ್ತಿದ್ದಾನೆ. ಈತನ ಕಿರುಕುಳ ತಾಳಲಾರದೇ ಸಾಕಷ್ಟು ಜನ ಅಂಜಿ ಸರಕಾರಿ ಸೇವೆ ಮಾಡಲು ಹೆದರುತಿದ್ದಾರೆ. ಅದು ಅಲ್ಲದೆ ಮಾಹಿತಿ ಹಕ್ಕಿನ ಮೂಲಕ ಅರ್ಜಿಯನ್ನು ದಾಖಲಿಸುವದಾಗಿ ಧಮಕಿ ಹಾಕಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಡುತ್ತಾನೆ. ಈತನ ಈ ಕೃತ್ಯಕ್ಕೆ ಹಲವಾರು ಜನ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದರು. 

ಈತನ ತಾಯಿ ಗೌರಾಬಾಯಿ ಅಕ್ಕಿವಾಡ ಅವರು ಸಾವಳಗಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಸಹ ಅಂಗನವಾಡಿಗೆ ಹೋಗದೆ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಸರ್ಕಾರ ನೀಡಿದ ಪೌಷ್ಟಿಕ ಪದಾರ್ಥಗಳನ್ನು ನೀಡದೆ ಅವುಗಳನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವುದಲ್ಲದೆ ಮಾರಾಟ ಸಹ ಮಾಡುತ್ತಾಳೆ. ಸಂಬಂಧಪಟ್ಟ ಪಾಲಕರು ಕೇಳಲು ಹೋದರೆ ಅವರ ಮೇಲೆ ನನ್ನ ಮಗ ಪತ್ರಕರ್ತನಿದ್ದಾನೆಂದು ದಬ್ಬಾಳಿಕೆ ಮಾಡುತ್ತಿದ್ದಾಳೆಂದು ಆರೋಪಿಸಿದರು. 

ಇದೇ ಸಂದರ್ಭದಲ್ಲಿ ಸುಶೀಲಕುಮಾರ ಬೆಳಗಲಿ, ಸತಗೌಡ ನ್ಯಾಮಗೌಡ, ರಾಮಣ್ಣ ಬಂಡಿವಡ್ಡರ, ತುಕಾರಾಮ ಬಾಪಕರ, ಲಿಂಗನಗೌಡ ಪಾಟೀಲ, ಸುಜೀತಕುಮಾರ ಪಾಟೀಲ, ಬಸವರಾಜ ಶೇಗುಣಸಿ, ಜನಕರ ನಾಂದ್ರೇಕರ, ಬಸವರಾಜ ಪರಮಗೊಂಡ, ಅಣ್ಣಪ್ಪ ಮಾಲಗಾಂವಿ, ರಾವತ ತೇಲಿ, ಸಾಗರ ಜಾಧವ, ಭೀಮಪ್ಪ ಕರಕರ, ಕಿರಣ ಕದಂ, ಬಾಬು ಮನೋಜ, ಅಣ್ಣಪ್ಪಾ ಟೀಕವಟಕರ, ಶಶಿಕುಮಾರ ಬಾಪಕರ, ಮಾಹಾವೀರ ಕವಟೇಕರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ