ಧರ್ಮರ ದೇವರ ಜಾತ್ರಾ ಮಹೋತ್ಸವ
ದೇವತೆಗಳಿಗೆ ಸಾರಾಯಿಯೇ ನೈವೇದ್ಯ
ಇಂಡಿ12 : ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಅಣ್ಣುಗಳ ಅಭಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದೇವರಿಗೆ ಮಧ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ. ಇದು ವಿಚಿತ್ರ ಎನಿಸಿದರೂ ಕಟು ಸತ್ಯ.
ಈ ದೇವರಿಗೆ ಮಧ್ಯಾಭೀಷೇಕ ಏಕೆ ಮಾಡುತ್ತಾರೆ? ಹಾಗೆ ಮಾಡುವುದರಿಂದ ಏನು ಪ್ರಯೋಜನ? ಇಷ್ಟಕ್ಕೂ ಆ ದೇವರಿರುವುದು ಎಲ್ಲಿ ಎಂಬ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಈ ದೇವರಿರುವುದು ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ. ಈ ದೇವರನ್ನು ಧರ್ಮರ ದೇವರು (ಮರುಳಸಿಧ್ಧೇಶ್ವರ) ಎಂದು ಕರೆಯುತ್ತಾರೆ. ಪಟ್ಟಣದಿಂದ ಸುಮಾರು 06 ಕಿ ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಮರುಸಿದ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ ಈ ದೇವತೆಗಳಿಗೆ ವಿಷೇಶವಿದೆ ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಮತ್ತು ಮೊದಲ ಗುರುವಾರರಂದು ನಡೆಯುತ್ತದೆ.
ಈ ಬಾರಿ ಮಾ. 13 ಶನಿವಾರ ಶಿವರಾತ್ರಿ ಅಮವಾಸ್ಯೆ ಇರುವುದರಿಂದ ಮಾ. 15 ಸೋಮವಾರದಂದೇ ಧರ್ಮರ ದೇವರ (ಮರುಳಸಿದ್ಧೇಶ್ವರ) ಜಾತ್ರಾ ಮಹೋತ್ಸವವಿದೆ. ಮಾ. 18 ರಂದು ನಿಜಲಿಂಗತಾಯಿ ದೇವತೆಯ ಜಾತ್ರಾ ಮಹೋತ್ಸವವಿದೆ.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರ (ಶ್ರೀ ಮರುಳಸಿದ್ದೇಶ್ವರ) ಜಾತ್ರಾ ಮಹೋತ್ಸವ ಮಾ 15 ಸೋಮವಾರರಂದು ನಡೆಯಲಿದೆ.
ಅಂದು ಬೆಳಿಗ್ಗೆ ಮರುಳಸಿದ್ದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಸಾಯಂಕಾಲ 6:00 ಘಂಟೆಗೆ ಗಂಗೆ ಸೀತಾಳ, ರಾತ್ರಿ 8:00 ಘಂಟೆಗೆ ದೇವರಿಗೆ ವಿಶೇಷ ಅಭಿಷೇಕ ನಡೆಯಲಿದೆ. ತದನಂತರ ನುಡಿಮುತ್ತು (ದೇವರ ಹೇಳಿಕೆ) ಕಾರ್ಯಕ್ರಮವಿದ್ದು ರಾತ್ರಿ 9:00 ಘಂಟೆಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.
ಅದೇ ದಿನ ರಾತ್ರಿ 10 ಘಂಟೆಗೆ ಸರಿಯಾಗಿ ಅಥಣಿ ತಾಲೂಕಿನ ಬಾಳಿಗೇರಿಯ ಚಂದ್ರಕಾಂತ ಗುರಪ್ಪ ನಾಟೀಕಾರ, ವಿದ್ಯಾವತಿ ಮಸಬಿನಾಳ ಅವರಿಂದ ಸುಪ್ರಸಿದ್ಧ ಗೀಗೀ ಪದಗಳು ಜರುಗಲಿವೆ.
ಮಾ.18 ರಂದು ನಿಜಲಿಂಗತಾಯಿಯ ಜಾತ್ರಾ ಮಹೋತ್ಸವವಿದ್ದು ಅಂದು ಬೆಳಿಗ್ಗೆ ದೇವತೆಗೆ ವಿಶೇಷ ಪೂಜಾ ಕಾರ್ಯಕ್ರಮ ನಂತರ ಸಾಯಂಕಾಲ 5:00 ಘಂಟೆಗೆ ಗಂಗೆ ಸೀತಾಳ ಕಾರ್ಯಕ್ರಮವಿದ್ದು, ರಾತ್ರಿ 8:00 ಘಂಟೆಗೆ ನುಡಿಮುತ್ತುಗಳು ನಡೆಯಲಿವೆ. ಅದೇ ದಿನ ರಾತ್ರಿ 10:00 ಘಂಟೆಗೆ ಸರಿಯಾಗಿ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.
ವಿಶೇಷ ಮಧ್ಯಾಭಿಷೇಕ: ಈ ದೇವತೆಗಳ ವಿಶೇಷತೆಯೆಂದರೆ ಜಾತ್ರಾ ಮಹೋತ್ಸವದ ದಿನ ರಾತ್ರಿ 08 ಘಂಟೆಗೆ ಈ ದೇವತೆಗಳಿಗೆ ಭಕ್ತರು ನೈವೇದ್ಯ ರೂಪದಲ್ಲಿ ಸಾರಾಯಿಯನ್ನು ನೀಡುತ್ತಾರಂತೆ ಹೌದು ಇದು ವಿಚಿತ್ರ ಆಚರಣೆ ಆದರೂ ಸತ್ಯ ಯಾಕೆ ಈ ರೀತಿ ಮಾಡ್ತೀರಿ ಅಂತ ಭಕ್ತರನ್ನ ಕೇಳೀದ್ರೆ ಹೇಳೋದು ಅನಾದಿ ಕಾಲದಿಂದಲು ನಡೆದು ಬಂದ ಪದ್ಧತಿಯಾಗಿದ್ದು ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ನಮ್ಮ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸರಾಗವಾಗಿ ಆಗುತ್ತವೆ ಎನ್ನುವ ನಂಬಿಕೆ ಇದೆ. ಇನ್ನೊಂದು ವಿಶೇಷÀ ಅಂದರೆ ಈ ನೈವೇದ್ಯ ಆದ ಮೇಲೆ ಸಾರಾಯಿಯನ್ನು ಎಲ್ಲ ಭಕ್ತಾದಿಗಳು (ಗಂಡಸರು ಮಾತ್ರ ) ತೀರ್ಥ ಎಂದು ಸಾರಾಯಿ ಸ್ವೀಕರಿಸುತ್ತಾರೆ.
ಭಕ್ತರ ದಂಡು: ಈ ದೇವತೆಗಳ ದರ್ಶನಕ್ಕೆ ತಾಲೂಕು ಅಲ್ಲದೆ ಗಡಿ ಭಾಗದ ಮಹಾರಾಷ್ಟ್ರದಿಂದಲೂ ಆಗಮಿಸುತ್ತಾರೆ ಈ ದೇವತೆಗಳ ದರ್ಶನ ಪಡೆದು ಮಧ್ಯದ ತೀರ್ಥ ಸ್ವೀಕರಿಸಿ ನುಡಿಮುತ್ತು (ಹೇಳಿಕೆ) ಕೇಳಿಕೊಂಡು ಹೋಗುವುದು ವಾಡಿಕೆಯಾಗಿದೆ.
ಏನೀ ಹೇಳಿಕೆ ಅಂದ್ರೆ? ದೇವತೆಗಳ ಪೂಜಾ ಕಾರ್ಯಕ್ರಮ ಮುಗಿದ ಮೇಲೆ ತೆಂಗಿನ ಕಾಯಿಗಳ ಮುಖಾಂತರ ಹೇಳಿಕೆಗಳು ನಡೆಯುತ್ತವೆ. ತೆಂಗಿನಕಾಯಿ ಒಡೆದಾಗ ಅದರ ಮುಂಭಾಗದ ಹೊಳಿಕೆ ಆಕಾಶದ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ವಿಘ್ನವಿಲ್ಲ ವರ್ಷವಿಡೀ ಉತ್ತಮವಾದ ಜೀವನ ಸಾಗಿಸುತ್ತಾನೆ ಎಂದರ್ಥ. ಅದು ಆಕಸ್ಮಾತ್ ಭೂಮಿ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ತೊಂದರೆಯಂತೆ ವರ್ಷವಿಡೀ ವಿಘ್ನಗಳು ಬರುತ್ತವೆಯಂತೆ
ಆ ದೇವತೆಗಳನ್ನು ನಂಬಿದ ಭಕ್ತ ವರ್ಗ ಅವರು ಬೇಡಿಕಮೊಂಡ ಹರಕೆಗಳು ಕೈಗೊಂಡಾಗ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ಸಾಯಂಕಾಲ ದೀರ್ಘದಂಡ ನಮಸ್ಕಾರ ಹಾಕುವ ಪದ್ಧತಿ ಇದೆ. ವಿಶೇಷವೆಂದರೆ ಈ ದೇವತೆಗಳಿಗೆ ಹಿಂದೂ-ಮುಸ್ಲಿಂ ಎರಡು ಜನಾಂಗದವರು ಸಾಮರಸ್ಯದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತ ಅದ್ಧೂರಿಯಾಗಿ ಜಾತ್ರೆ ಮಾಡುವ ಸಂಪ್ರದಾಯವಿದೆ.
ಗ್ರಾಮದ ಹಿರಿಯರಾದ ವಿಠ್ಠಲ ಜಾಧವ: ಹಿಂದಿನ ಕಾಲದಿಂದಲೂ ಈ ದೇವತೆಗಳ ಜಾತ್ರೆ ಮಾಡುತ್ತಾ ಬಂದಿದ್ದಾರೆ ಗ್ರಾಮಸ್ಥರು ಅಲ್ಲದೆ ತಾಲೂಕು ಸೇರಿದಂತೆ ಮಹಾರಾಷ್ಟ್ರದಿಂದಲೂ ಭಕ್ತರು ಬರುತ್ತಾರೆ ನಂಬಿಕೆ ಇಟ್ಟ ಭಕ್ತರನ್ನು ದೇವತೆಗಳು ಕೈ ಬಿಟ್ಟಿಲ್ಲ ಅನೇಕ ಜನರಿಗೆ ಮಕ್ಕಳಾಗಿರಲಿಲ್ಲ ಇಲ್ಲಿ ದೇವರಿಗೆ ಹರಕೆ ಹೊತ್ತು ಹೋದ ಎರಡು ವರ್ಷದಲ್ಲಿ ಸಂತಾನ ಪ್ರಾಪ್ತಿಯಾದ ಉದಾಹರಣೆಗಳು ಇವೆ.