ಕಾರವಾರ

ಸಂಭ್ರಮದ ಗುಡ್ನಾಪೂರ ಬಂಗಾರೇಶ್ವರ ತೆಪ್ಪೋತ್ಸವ

ಸಂಭ್ರಮದ ಗುಡ್ನಾಪೂರ ಬಂಗಾರೇಶ್ವರ ತೆಪ್ಪೋತ್ಸವ

ಬನವಾಸಿ 17: ಸಮೀಪದ ಗುಡ್ನಾಪೂರ ಗ್ರಾಮದಲ್ಲಿನ ಪುರಾಣ ಪ್ರಸಿದ್ದ ಶ್ರೀ ಬಂಗಾರೇಶ್ವರ ದೇವರ ತೆಪ್ಪೋತ್ಸವ ಗುಡ್ನಾಪೂರ ಕೆರೆಯಲ್ಲಿ ಮಂಗಳವಾರ ರಾತ್ರಿ ಅಪಾರ ಭಕ್ತ ಸಮೂಹದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಾತ್ರಿ ಶ್ರೀ ಬಂಗಾರೇಶ್ವರ ದೇವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದ ತೆಪ್ಪದಲ್ಲಿ ಇಟ್ಟು ಪೂಜಾ ವಿಧಿ ವಿಧಾನ ಮಾಡಿದ ನಂತರ ಕೆರೆಯ ಸುತ್ತ ಪ್ರದಕ್ಷಿಣೆ ಹಾಕುವ ಮುಖಾಂತರ ತೆಪೋತ್ಸವ ಅದ್ದೂರಿಯಾಗಿ ಜರುಗಿತು.  ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾಧಿಗಳು ಆಗಮಿಸಿ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿ ತೆಪ್ಪೋತ್ಸವ ಕಂಡು ಪುನೀತರಾದರು.

ಸುದ್ದಿ ಓದಿ