ತಾಳಿಕೋಟಿ

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ತ್ಯಾಗ ಅವಿಸ್ಮರಣೀಯ

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ತ್ಯಾಗ ಅವಿಸ್ಮರಣೀಯ
ತಾಳಿಕೋಟೆ ಪಟ್ಠಣದಲ್ಲಿ ನಡೆದ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಲಾಯಿತು.

ತಾಳಿಕೋಟೆ 28: ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿ ಅವರ ತ್ಯಾಗ, ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯವಾದುದು ಎಂದು ನಿವೃತ್ತ ಉಪನ್ಯಾಸಕ ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಜಿಎಸ್‌. ಜಮ್ಮಲದಿನ್ನಿ ಹೇಳಿದರು. 

ಅವರು ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ತಾಲುಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಲಿಂ.ಸಾಹೇಬಗೌಡ ಹುಚ್ಚಪ್ಪಗೌಡ ಪಾಟೀಲ, ಲಿಂ.ಸುಬ್ಬಣ್ಣ ಈಶ್ವರ​‍್ಪ ದ್ಯಾಪೂರ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ಅಮೂಲ್ಯವಾದ ತಾಳೆಗರಿಗಳನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ಗ್ರಂಥ ರೂಪದಲ್ಲಿ ಎಲ್ಲರೂ ಓದಲು ಅನುಕೂಲವಾಗುವಂತೆ ಮುದ್ರಿಸಿದ ಫ.ಗು.ಹಳಕಟ್ಟಿಯವರ ಕಾರ್ಯದಿಂದಾಗಿ ಇಂದು ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ. ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಸಂದೇಶಗಳು, ವಿಶ್ವ ಶಾಂತಿ, ವಿಶ್ವ ಪ್ರೇಮ ಮೂಡಿಸುತ್ತವೆ. ವಚನ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕೆ ಮನೆಮನೆಗಳಿಗೆ ತೆರಳಿ ಬೇಡಿದ ಅವರ ತ್ಯಾಗ, ಅರಾ​‍್ಣ ಮನೋಭಾವ ಮತ್ತು ಅವುಗಳ ಸಂರಕ್ಷಣೆ ಹಾಗೂ ಮುದ್ರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅತ್ಯಮೂಲ್ಯ ಕೊಡುಗೆ, ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಗುರುತಿಸುವಂತೆ ಮಾಡಿದೆ. ಯುವಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು. 

ಹಿರಿಯ ಜನಪದ ಕಲಾವಿದ ಗೈಬುಸಾಬ ಮಕಾಂದಾರ, ಕಸಾಪ ಅಧ್ಯಕ್ಷ ಆರ್‌.ಎಲ್‌. ಕೊಪ್ಪದ, ಹಿರಿಯ ಪತ್ರಕರ್ತ ಜಿ.ಟಿ.ಘೋರೆ​‍್ಡ, ಅಧ್ಯಕ್ಷತೆ ವಹಿಸಿದ್ದ ಎಸ್‌.ಎಸ್‌.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್‌.ಎಸ್‌.ಪಾಟೀಲ ಮಾತನಾಡಿದರು. 

ಕಸಾಪ ಸದಸ್ಯರಾದ ಡಾ.ನಜೀರ ಕೊಳ್ಯಾಳ, ಎಂ.ಎಂ.ವಾಲಿ, ಶಿಕ್ಷಕ ವಿಶ್ವನಾಥ ಗಣಾಚಾರಿ, ಬಿ.ಆರ್‌.ಪೋಲಿಸ್‌ಪಾಟೀಲ, ಪಿ.ಬಿ.ಚೌದ್ರಿ, ಎಂ.ಎಚ್‌.ಹಂದ್ರಾಳ, ಅಶೋಕ ಕಟ್ಟಿ, ಮಲ್ಲು ರಾಯಗೊಂಡ, ಆರಿಫ ಹೊನ್ನುಟಗಿ, ಅನಿಲಕುಮಾರ ಇರಾಜ, ಫಾರುಕ್ ಗಟನೂರ, ರಾಜು ರಾಠೋಡ, ಎಸ್‌.ಡಿ.ಕರಜಗಿ, ಜೆ.ಎಸ್‌.ಕಟ್ಟಿಮನಿ, ಎಸ್‌.ವ್ಹಿ.ಬೆನಕಟ್ಟಿ, ಸೇರಿದಂತೆ ಇತರರು ಇದ್ದರು. 

ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಗುಂಡುರಾವ ಧನಪಾಲ ಸ್ವಾಗತಿಸಿ,ಪರಿಚಯಿಸಿದರು.  ಶಿಕ್ಷಕ ಬಿ.ಆಯ್‌.ಹಿರೇಹೊಳಿ, ಆರ್‌.ಬಿ.ದಾನಿ ನಿರೂಪಸಿದರು.ಎಸ್‌.ವ್ಹಿ.ಜಾಮಗೊಂಡಿ ವಂದಿಸಿದರು. 

ಸುದ್ದಿ ಓದಿ