ಯರಗಟ್ಟಿ

ಪಠ್ಯೇತರ ಚಟುವಟಿಕೆ ಅವಶ್ಯಕ: ಹಿರೇಮಠ

ಪಠ್ಯೇತರ ಚಟುವಟಿಕೆ ಅವಶ್ಯಕ: ಹಿರೇಮಠ

ಯರಗಟ್ಟಿ,31:  ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಸವದತ್ತಿ ಬಿ ಆರ್ ಪಿ ವಿ.ಸಿ.ಹಿರೇಮಠ ಹೇಳಿದರು. 

ಯರಗಟ್ಟಿ ತಾಲ್ಲೂಕಿನ ಶ್ರೀರಂಗಪೂರ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ತಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ತಲ್ಲೂರ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಜಿ.ಎನ್‌.ಮಲಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ,ಪ್ರತಿಯೊಂದು ಮಗುವಿನಲ್ಲಿರುವ ಸುಪ್ತ ಕೌಶಲ್ಯಗಳನ್ನು ಹೊರ ಹಾಕುವ ವೇದಿಕೆ ಪ್ರತಿಭಾ ಕಾರಂಜಿಯಾಗಿದೆ ಎಂದರು. 

ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡಲೀಕ ಉಪ್ಪಾರ, ಎಪಿಎಂಸಿ ಸದಸ್ಯ ಸಿದ್ದಾರೂಢ ಬಿಲಕಂಚಿ,ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ ಹೊಟ್ಟಿನವರ,ಎಸ್‌.ಎಫ್‌.ಪಚ್ಚಿನವರ,ಸೋಮಪ್ಪ ಕಲ್ಲೋಳ್ಳಿ, ಗಣ್ಯರಾದ ಬಾಬು ಪರಾಶಿ,ಪ್ರಭು ನಾಗನೂರ,ಸಂಗಪ್ಪ.ಸೊಪ್ಪಡ್ಲ ಬಿ.ಬಿ.ಮನಿಕಟ್ಟಿ,ಜಿ.ಎಚ್‌.ದೊಡಮನಿ,ಎ.ಬಿ.ದೇಶನೂರ,ಬಸವರಾಜ ಸುಣಗಾರ,ಸುರೇಶ ಹೊಟ್ಟಿನವರ,ದ್ಯಾಮಣ್ಣ. ಕುರಿ, ಎ. ಬಿ. ಬಿಲಕಂಚಿ, ಎಮ್‌. ಬಿ. ಕಲಕುಟ್ರಿ.ವಿಠ್ಠಲ. ಪಚ್ಚಿನವರ ಹಾಗೂ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಫಕೀರ​‍್ಪ. ಮನಿಕಟ್ಟಿ, ಉಪಾಧ್ಯಕ್ಷ ಗಂಗಪ್ಪ.ಗುಂಡ್ಲಮನಿ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ತಲ್ಲೂರ ಕ್ಲಸ್ಟರ್ ಶಾಲೆಗಳ ಪ್ರಧಾನಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲೆಯ ಪ್ರಧಾನ ಗುರುಗಳಾದ ವಿ.ಪಿ.ಸೊನೋನೆ ಸ್ವಾಗತಿಸಿದರು. ಗುರುಮಾತೆಯರಾದ ಶಿಲ್ಪಾ.ರಂಗಿ ನಿರೂಪಿಸಿದರು. ಬಿ. ಜಿ. ದೇವಡಿ ವಂದಿಸಿದರು. 


ಸುದ್ದಿ ಓದಿ