ತಾಳಿಕೋಟಿ

ಬೆಳೆಗಳಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ನಿರೀಕ್ಷೆ- ರೈತರಿಗೆ ಸಲಹೆ

ಬೆಳೆಗಳಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ನಿರೀಕ್ಷೆ- ರೈತರಿಗೆ ಸಲಹೆ

ತಾಳಿಕೋಟೆ28: ಹೋಬಳಿಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಉಷ್ಣಾಂಶ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ನೀರೀಕ್ಷೆಯಿದ್ದು ರೈತರು ಕೃಷಿ ಇಲಾಖೆಯಿಂದ ಸೂಚಿಸಿದ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ , ಹೋಬಳಿಯಾದ್ಯಂತ ಸಂಚರಿಸಿದಾಗ ಹೆಸರು ಬೆಳೆಗೆ ನಂಜಾಣುರೋಗ ಮತ್ತು ಎಲೆ ನಂಜಾಣು ಅಫೀಡ್ ಹೇನು ಹಾವಳಿ ಹೆಚ್ಚಾಗಿದ್ದು ನಿರ್ವಹಣೆಗಾಗಿ ರೈತರು ಇಮಿಡಾಕ್ಲಪ್ರಿಡ್ 1ಮಿ.ಲೀ, ಇಲ್ಲವೇ ಥಯೋಮಿಥಾಕ್ಸಾಮ್ 1 ಗ್ರಾಂ, ಇಲ್ಲವೇ ಅಸಿಟಾಮೊಪ್ರಿಡ್ 1 ಗ್ರಾಂನ್ನು 4 ಲೀ ನೀರಿಗೆ + 5 ಗ್ರಾಂ 19 ಗೊಬ್ಬರ ಎಲ್ಲವೂ ಪ್ರತಿ ಲೀಟರ್ ನೀರಿಗೆ  ಬೆರೆಸಿ ಸಿಂಪಡಿಸಬೇಕು.  

ಇನ್ನುಳಿದಂತೆ ಸೂರ್ಯಕಾಂತಿಯಲ್ಲಿ ನಂಜುರೋಗದ ತೀವ್ರತೆ ಹೆಚ್ಚಾಗುವ ನೀರೀಕ್ಷೆಯಿದ್ದು (ಎಲೆಗಳು ಅಂಟಿನಿಂದ ಸುಟ್ಟ ರೀತಿಯಲ್ಲಿ ಕಪ್ಪನೆಯ ಒಣಗುವಿಕೆಯಿಂದ ಎಲೆ ಮುದುರಿಕೊಳ್ಳುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅದರ ನಿಯಂತ್ರಣಕ್ಕಾಗಿ ರೋಗ ತಗುಲಿದ ಗಿಡಗಳನ್ನು ಕಿತ್ತು ಹಾಕಬೇಕು ಹಾಗೂ ಸುಡಬೇಕು. ರೋಗವಾಹಕ ಕಳೆಗಿಡಗಳಾದ ಪಾರ್ಥೆನಿಯಂ ಮತ್ತು ಅಂಟರಕಿ ಕಸಗಳನ್ನು ನಾಶಪಡಿಸಬೇಕು. ನಂತರ ಅಂತರವ್ಯಾಪಿ ಕೀಟನಾಶಕಗಳಾದ ಇಮಿಡಾಕ್ಲೊಪ್ರಿಡ್ 0.3 ಮಿಲೀ ಇಲ್ಲವೇ ಥೈಯೋಮಿಥಾಕ್ಸಾಮ್ 0.25ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಸೂರ್ಯಕಾಂತಿ ಬೂದಿರೋಗದ ನಿರ್ವಹಣೆಗಾಗಿ 01 ಲೀಟರ್ ನೀರಿನಲ್ಲಿ ಕರಗುವ ಗಂಧಕ 3ಗ್ರಾ /ಲೀ ಇಲ್ಲವೇ ಹೆಕ್ಸಾಕೊನಾಜೋಲ್ 1 ಮಿಲೀ ನ್ನು ಪ್ರತಿ ಲೀಟರ್‌ಗೂ ಬೆರೆಸಿ ಸಿಂಪಡಿಸಬೇಕು. ಸೂರ್ಯಕಾಂತಿ ಬೆಳೆಯ ಮೇಲೆ ಕಪ್ಪು ತಲೆ ಕಂಬಳಿಹುಳು ಉವಿನ ಬಾಧೆ ಕಂಡು ಬರುವ ಸಾಧ್ಯತೆ ಇರುವುದರಿಂದ ರೈತರು ಈ ಮುಂದಿನ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಹೊಲದಲ್ಲಿರುವ ಕಸಕಡ್ಡಿಗಳನ್ನು ರಾಶಿ ಮಾಡಿ ಸಂಜೆ ಹೊತ್ತಿನಲ್ಲಿ ಬೆಂಕಿಹಾಕಿ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗುಂಪುಗಳನ್ನು ಎಲೆ ಸಮೇತ ಕಿತ್ತು ನಾಶಪಡಿಸಬೇಕು. ಎಲೆಗಳ ಕೆಳಗೆ ಗುಂಪಾಗಿ ಹರಡಿರುವ ಮರಿಹುಳುಗಳನ್ನು ನಾಸಪಡಿಸಬೇಕು ಇಲ್ಲವೇ ಸಾಯಿಸಿ ಹೂಳಬೇಕು. ಬೆಳೆದ ಮರಿಹುಳುಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ವಲಸೆ ಹೋಗದಂತೆ ಹೊಲದ ಸುತ್ತಲೂ ಆಳವಾಗಿ ನೇಗಿಲಿನಿಂದ ಸಾಲು ತೆಗೆದು ಅದರಲ್ಲಿ ಶೇ.5ರ ಮೇಲಥಿಯಾನ್ ಇಲ್ಲವೇ ಶೇ0.4ರ ಪೆನವಲರೇಟ್ ಕೀಟನಾಶಕವನ್ನು ಧೂಮೀಕರಿಸಬೇಕು. ಕೀಟಗಳಿಗೆ ಕ್ಲೋಪೈರಿಪಾಸ್ 20ಇಸಿ(205ಮಿ.ಲೀ) ಇಲ್ಲವೇ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ಮತ್ತು ಕ್ವಿನಾಲಫಾಸ್ 25ಇಸಿ2ಮಿ/ಲೀಟರ್ ನೀರಿಗೆ ಇಲ್ಲವೇ ಮಿಥೈಲ್ ಪ್ಯಾರಾಥೈಯಾನ್ 50ಇಸಿ ಅಥವಾ 1 ಮಿಲೀ ಪ್ರತಿ ಲೀಟರ್ ನೀರಿಗೆ ಇಲ್ಲವೇ ಸೈಪರ್ ಮೇಥ್ರಿನ್ 10ಇಸಿಅ0.5 ಮಿಲೀ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಾಗ ಕೀಟಗಳು ನಿರ್ವಹಣೆಗೆ ಬರುತ್ತವೆ ಎಂದರು. 

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಎಂ.ಎಚ್‌.ಬೀಳಗಿ, ಸಿಬ್ಬಂದಿಗಳಾದ ಸಂಗಮೇಶ ಪಾಟೀಲ, ಕಿರಣ ಬೊಮ್ಮನಳ್ಳಿ, ಅಮರೇಶ ಅಂಗಡಿ, ವಿರೂಪಾಕ್ಷಿ ನಂದಿಕೋಲ ಬಸವರಾಜ ಸರಶೆಟ್ಟಿ ಇದ್ದರು. 


ಸುದ್ದಿ ಓದಿ