ಮಹಿಳಾಪರ ವಿಚಾರಗಳು, ಮಹಿಳಾ ಸಾಧಕಿಯರ ಜೀವನ ಚರಿತ್ರೆಗಳು ಹಾಗೂ ಮಹಿಳೆಯರ ಸಾಧನೆಗಳಿಗೆ ಸಂಬಂಧಿಸಿದ ಅನೇಕ ಪುಸ್ತಕಗಳ ಪ್ರದರ್ಶನ
ಲೋಕದರ್ಶನ ವರದಿ
ವಿಜಯಪುರ 07: ಮಹಿಳೆಯರ ಸಾಧನೆಗಳು, ಅವರ ಹಕ್ಕುಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಇಂತಹ ಮಹಿಳಾ ಕೇಂದ್ರಿಕೃತ ಪುಸ್ತಕ ಪ್ರದರ್ಶನಗಳು ಸಹಾಯಕವಾಗುತ್ತವೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ವಿಶ್ವವಿದ್ಯಾನಿಲಯ ಗ್ರಂಥಾಲಯದ ಸಹಯೋಗದಲ್ಲಿ ಮಾರ್ಚ್ 7 ರಿಂದ ಮಾರ್ಚ್ 10 ರವರೆಗೆ ವಿಶ್ವವಿದ್ಯಾನಿಲಯ ಗ್ರಂಥಾಲಯ ಆವರಣದಲ್ಲಿ ವಿಶೇಷ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಪ್ರಭಾರ ಗ್ರಂಥಪಾಲಕ ಪ್ರೊ.ಪಿ.ಜಿ.ತಡಸದ ಮಾತನಾಡಿ, ಮಹಿಳಾಪರ ವಿಚಾರಗಳು, ಮಹಿಳಾ ಸಾಧಕಿಯರ ಜೀವನ ಚರಿತ್ರೆಗಳು ಹಾಗೂ ಮಹಿಳೆಯರ ಸಾಧನೆಗಳಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣನವರ, ಸಿಂಡಿಕೇಟ್ ಸದಸ್ಯರಾದ ಮಮತಾ, ಸೈದಪ್ಪ ಮಾದರ, ಶಿವಯೋಗಪ್ಪ ಮಾಡ್ಯಾಳ ಹಾಗೂ ಡಾ.ನಾಗೇಂದ್ರ ಬಿರಾದಾರ, ಪ್ರೊ.ಶಾಂತದೇವಿ ಟಿ. ಹಾಗೂ ಪ್ರೊ.ಲಕ್ಷ್ಮೀದೇವಿ ವೈ, ಗ್ರಂಥಾಲಯ ಸಿಬ್ಬಂದಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.