ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ
ತಾಳಿಕೋಟೆ12: ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಪರಂಪರೆ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕೊಡಗು, ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಬಂಗಾಳ, ತಮಿಳುನಾಡು, ಆಂಧ್ರ್ರದೇಶ, ಅಸ್ಸಾಂ, ರಾಜ್ಯಗಳ ಮಾದರಿಯ ಉಡುಪುಗಳು ವಿದ್ಯಾರ್ಥಿನಿಯರು ತೊಟ್ಟು ಕಂಗೊಳಿಸಿದರು. ವಿದ್ಯಾರ್ಥಿನಿಯರು ವಿವಿಧ ರಾಜ್ಯಗಳ ಉಡುಪುಗಳ ಪ್ರದರ್ಶನ ಮಾಡುವುದರ ಜೊತೆಗೆ ಆ ರಾಜ್ಯಗಳ ಉಡುಪಿನ ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡಿದರು.
ಉಪನ್ಯಾಸಕ ಉಮೇಸ ಮಂಗೊಂಡ ಮಾತನಾಡಿ, ಭಾರತ ವೈವಿಧ್ಯಮಯ ಭಿನ್ನ ಸಂಸ್ಕೃತಿಯನ್ನು ಹೊಂದಿದೆ. ಜನ, ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವ ಭಾರತೀಯ ಸಂಸ್ಕೃತಿಯನ್ನು ರೂಪಿಸಿದೆ. ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೆ ತನ್ನದೇ ಆದ ಪ್ರಭಾವ ಬೀರಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳ ಜನ ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ರಮೇಶ ಬಂಟನೂರ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ವಾಯ್.ಎಚ್.ಅಂಗಡಗೇರಿ, ಕೆ.ಎಮ್.ಸರಶೆಟ್ಟಿ. ವಿಜಯಲಕ್ಷಿ-್ಮ ಮಠ. ಎ.ಎಸ್.ಕಲ್ಮಠ. ಸಂಗಮೇಶ್ ಕೊತ್ತಂಬರಿ. ಹಾಗೂ ಪ್ರಥಮ. ತೃತೀಯ ಸೆಮಿಸ್ಟರನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಅಕ್ಷತಾ ಬಿರಾದಾರ ಸ್ವಾಗತಿಸಿದರು. ಬಸವರಾಜ ವಂದಿಸಿದರು. ಮಹೇಶ್ ಪತ್ತಾರ ನಿರೂಪಿಸಿದರು.